×
Ad

ಜೂ. 7: ಉಡುಪಿಯಲ್ಲಿ‌ ಸಿಇಟಿ, ನೀಟ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಶಿಬಿರ

Update: 2019-06-04 18:29 IST

ಮಂಗಳೂರಿನ ದಿ ಕ್ಯಾಂಪಸ್ ಕರಿಯರ್ ಅಕಾಡೆಮಿ ಸಂಸ್ಥೆಯು ಉಡುಪಿ ಬನ್ನಂಜೆಯ ಬಿಲ್ಲವರ ಸೇವಾ ಸಂಘ ಮತ್ತು ಉಡುಪಿ ಪರ್ಕಳದ ನೇತಾಜಿ ಸ್ಪೋಟ್ಸ್೯ ಇವರ ಸಹಯೋಗದೊಂದಿಗೆ ಸಿಇಟಿ ಮತ್ತು ನೀಟ್ ಪ್ರವೇಶ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ಪೂರ್ವ ಮಾರ್ಗದರ್ಶನ ಶಿಬಿರವನ್ನು ಹಮ್ಮಿಕೊಂಡಿದೆ.

ಜೂನ್ 7ರ ಮಧ್ಯಾಹ್ನ 2.30ಕ್ಕೆ ಉಡುಪಿ ಬನ್ನಂಜೆಯ ಬಿಲ್ಲವರ ಸೇವಾ ಸಂಘದ ಶಿವಗಿರಿ ಸಭಾಭವನದಲ್ಲಿ ಈ ಕಾರ್ಯಕ್ರಮವು ನಡೆಯಲಿದೆ. 

ಶಿಬಿರದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಯುನಾನಿ, ಹೋಮಿಯೋಪಥಿ, ಯೋಗ - ನ್ಯಾಚುರಾಪಥಿ, ಬಿ. ಫಾರ್ಮ, ಫಾರ್ಮ ಡಿ., ಇಂಜಿನೀಯರಿಂಗ್ ಮತ್ತು ಫಾರ್ಮ್ ಸಾಯನ್ಸ್ ನ ವಿವಿಧ ಕೋರ್ಸುಗಳಿಗೆ ನಡೆಯಲಿರುವ ಆನ್‍ಲೈನ್ ಸಿಇಟಿ/ನೀಟ್ ಕೌನ್ಸಿಲಿಂಗ್‍ನ ವಿಧಾನ, ದಾಖಲಾತಿ ಪರಿಶೀಲನೆ, ಬೇಕಾಗಿರುವ ಅಗತ್ಯ ದಾಖಲೆಗಳು, ಸೀಟುಗಳ ಆಯ್ಕೆ ಪ್ರಕ್ರಿಯೆ ಮತ್ತು ಪಿಯುಸಿ ಬಳಿಕ ಕಲಿಕೆಗಿರುವ ಅವಕಾಶಗಳ ಕುರಿತಂತೆ ಮಾಹಿತಿ ನೀಡಲಾಗುವುದು.

ಪ್ರವೇಶ ಉಚಿತವಾಗಿದ್ದು, ಕರಿಯರ್ ಗೈಡೆನ್ಸ್ ಎಂಡ್ ಇನ್ಫೊರ್ಮೇಶನ್ ಸೆಂಟರ್ ನ  ಸ್ಥಾಪಕಾಧ್ಯಕ್ಷ ಉಮರ್ ಯು. ಹೆಚ್. ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9448952964 ಅಥವಾ 9448252703 ಗೆ ಕರೆ ಮಾಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News