×
Ad

ಉಳ್ಳಾಲ: ಹಳೆ ವಿದ್ಯಾರ್ಥಿ ಸಂಘ ಮರ್ಖಲ್ ಇಸ್ಲಾಂ ವತಿಯಿಂದ ಈದ್ ಕಿಟ್ ವಿತರಣೆ

Update: 2019-06-04 20:18 IST

ಉಳ್ಳಾಲ: ಹಳೆ ವಿದ್ಯಾರ್ಥಿ ಸಂಘ ಮರ್ಖಲ್ ಇಸ್ಲಾಂ ಮದ್ರಸ ಹಳೆಕೋಟೆ ವತಿಯಿಂದ ಹಳೆಕೋಟೆ ಮತ್ತು ಉಳ್ಳಾಲ ಪರಿಸರದ ಅರ್ಹ ಕುಟುಂಬಗಳಿಗೆ ಈದ್ ಕಿಟ್ ವಿತರಣಾ ಕಾರ್ಯಕ್ರಮವು ಹಳೆಕೋಟೆ ಅಲ್ ಕರೀಮ್ ಜುಮಾ ಮಸೀದಿ ವಠಾರದಲ್ಲಿ ಇತ್ತೀಚೆಗೆ ನಡೆಯಿತು.

ಹಳೆಕೋಟೆ ಮಸೀದಿ ಖತೀಬ್ ಉಸ್ಮಾನ್ ಸಅದಿ ದುವಾ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಉಳ್ಳಾಲ ದರ್ಗಾ ಪ್ರಧಾನ ಕಾರ್ಯದರ್ಶಿ, ಹಳೆಕೋಟೆ ಮಸೀದಿ ಅಧ್ಯಕ್ಷ ಹಾಜಿ ತಾಹ, ಉಪಾಧ್ಯಕ್ಷ ಹಾಜಿ ಝೈನುದ್ದೀನ್, ಆದಂ ಮುಸ್ಲಿಯಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಲ್ಯಾಸ್ ಹಾಜಬ್ಬ, ಗೌರವಾಧ್ಯಕ್ಷ ಶಬೀರ್ ಹಸನ್, ಪದಾಧಿಕಾರಿಗಳಾದ  ಅಬ್ದುಲ್ ಶಮೀರ್, ಅಬ್ದುಲ್ ರವೂಫ್, ರಫೀಕ್ ಹಮೀದ್ ,ಸಫ್ವಾನ್ ಅಬ್ಬಾಸ್, ಕಮಾಲ್ ಹುಸೈನ್, ಸಿರಾಜ್ ಹೊಂಬೆಳಕು ಹಾಗೂ ಸಮಾಜ ಸೇವಕರಾದ ಅಲ್ತಾಫ್ ಯು.ಎಚ್ ಸಹಿತ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News