ಸಾಲಿಗ್ರಾಮ ಪಪಂ: ವಸತಿ ನಿರ್ಮಾಣಕ್ಕೆ ಸಹಾಯ ಧನ
Update: 2019-06-04 21:05 IST
ಉಡುಪಿ, ಜೂ.4: 2018-19ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆಯಡಿ ಸರಕಾರದಿಂದ 20 ಮನೆಗಳ ಗುರಿಯನ್ನು ನಿಗದಿಪಡಿಸ ಲಾಗಿದ್ದು, ಹೊಸ ಮನೆ ನಿರ್ಮಿಸಲು ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಂತ ನಿವೇಶನ ಹೊಂದಿರುವ ವಸತಿ ರಹಿತರು ಸಹಾಯ ಧನವನ್ನು ಪಡೆಯಬಹುದಾಗಿದೆ.
ಆಸಕ್ತರು ಸಂಬಂಧಿಸಿದ ಸೂಕ್ತ ದಾಖಲೆಗಳೊಂದಿಗೆ ಜೂ.30ರೊಳಗೆ ಸಾಲಿಗ್ರಾಮ ಪಟ್ಟಣಪಂಚಾಯತ್‌ಗೆ ದಾಖಲೆಗಳ ಸಹಿತ ಅರ್ಜಿ ಸಲ್ಲಿಸ ಬಹುದು ಎಂದು ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.