ಕಾಪು: ಯುವಕ ನಾಪತ್ತೆ
Update: 2019-06-04 21:09 IST
ಉಡುಪಿ, ಜೂ.4: ಕಾಪು ಮಲ್ಲಾರು ಗ್ರಾಮದ ಅಬೂಬುಕ್ಕರ್ ಎಂಬವರ ಮಗ ಸಕೀರ್ (37) ಎಂಬವರು ಎ.13ರಂದು ಉಡುಪಿಗೆ ಸ್ನೇಹಿತ ರೊಂದಿಗೆ ತೆರಳುವುದಾಗಿ ತಿಳಿಸಿದ್ದು, ವಾಪಾಸು ಬಂದಿಲ್ಲ.
ಇವರು 5.5 ಅಡಿ ಎತ್ತರವಿದ್ದು, ಗೋಧಿ ಮೈಬಣ್ಣ ಹೊಂದಿದ್ದಾರೆ. ಕನ್ನಡ, ತುಳು, ಮಲಯಾಳಿ ಭಾಷೆಯನ್ನು ಬಲ್ಲವರಾಗಿದ್ದು, ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾಪು ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ:0820-2551033, ಮೊಬೈಲ್ ನಂ: 9480805449, ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ, ಉಡುಪಿ ದೂ.ಸಂಖ್ಯೆ: 0820- 2520333, 9480805431ಗೆ ಮಾಹಿತಿ ನೀಡುವಂತೆ ಕಾಪು ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.