×
Ad

ಅರೋಗ್ಯ ವಿಮಾ ಕ್ಷೇತ್ರಕ್ಕೆ ಮಣಿಪಾಲ ಸಮೂಹ

Update: 2019-06-04 21:14 IST

ಮಂಗಳೂರು, ಜೂ.4: ಸಿಗ್ನಾ ಟಿಟಿಕೆ ಹೆಲ್ತ್ ಇನ್ಸೂರೆನ್ಸ್‌ನ ಶೇ.51ರಷ್ಟು ಪಾಲನ್ನು ಖರೀದಿಸುವ ಮೂಲಕ ಮಣಿಪಾಲ ಉದ್ಯಮ ಸಮೂಹ ಆರೋಗ್ಯ ವಿಮಾಕ್ಷೇತ್ರಕ್ಕೆ ಲಗ್ಗೆ ಇಟ್ಟಿದೆ. ಹೊಸದಾಗಿ ಕಂಪೆನಿ ಹೆಸರನ್ನು ಮಣಿಪಾಲ ಸಿಗ್ನಾ ಹೆಲ್ತ್ ಇನ್ಸೂರೆನ್ಸ್ ಕಂಪನಿ ಲಿ. ಎಂದು ಹೆಸರಿಸಲಾಗಿದ್ದು, ಅಗತ್ಯ ಶಾಸನಬದ್ಧ ಅನುಮೋದನೆ ಪಡೆಯಲಾಗಿದೆ.

ಟಿಟಿಕೆ ಗ್ರೂಪ್ ಈ ಜಂಟಿ ಉದ್ಯಮದಿಂದ ಹೊರಬರಲು ಯೋಜಿಸಿದ್ದು, ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಅನುಮೋದನೆಯ ನಂತರ ಈ ನಿರ್ಗಮನ ಜಾರಿಗೆ ಬರಲಿದೆ. ಕಂಪೆನಿಯ ಎಲ್ಲ ವಹಿವಾಟುಗಳು ಹೊಸ ಹೆಸರಿನಲ್ಲಿಯೇ ನಡೆಯಲಿವೆ ಎಂದು ಸಿಗ್ನಾ ಇಂಟರ್‌ನ್ಯಾಷನಲ್ ಮಾರ್ಕೆಟ್ಸ್‌ನ ಅಧ್ಯಕ್ಷ ಜಾಸನ್ ಸ್ಯಾಡ್ಲೆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

‘ಮಣಿಪಾಲ್ ಗ್ರೂಪ್‌ನ ಸಮಗ್ರ ಆರೋಗ್ಯ ಸೇವೆ ಮತ್ತು ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ನೆಟ್‌ವರ್ಕ್ಸ್ ಮತ್ತು ಸಿಗ್ನಾ ಗ್ಲೋಬಲ್ ಪರಿಣಿತಿಯು ಕಂಪೆನಿಯನ್ನು ನಿಜಾರ್ಥದಲ್ಲಿ ಆರೋಗ್ಯ ಸೇವಾಸಂಸ್ಥೆಯಾಗಿ ರೂಪಿಸಲಿದೆ ಎಂದು ಮಣಿಪಾಲ್ ಎಜ್ಯು ಮತ್ತು ಮೆಡಿಕಲ್ ಗ್ರೂಪ್‌ನ ಅಧ್ಯಕ್ಷ ಡಾ.ರಂಜನ್ ಪೈ ಅಭಿಪ್ರಾಯಪಟ್ಟಿದ್ದಾರೆ.

ಹೊಸ ಬ್ರಾಂಡ್ ಹಾಗೂ ಹೆಸರು ಬದಲಾವಣೆಯು ಕಂಪನಿಯ ಹಾಲಿ ಉದ್ಯಮದ ಮಾದರಿ, ಏಜೆಂಟರು, ಬ್ಯಾಂಕ್ ಅಶ್ಯುರೆನ್ಸ್ ಪಾಲುದಾರರು ಹಾಗೂ ಗ್ರಾಹಕರ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಕಂಪೆನಿಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿವರ್ಗ ಹಾಗೆಯೇ ಮುಂದುವರಿಯಲಿದೆ ಎಂದು ಪ್ರಕಟಣೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News