ತ್ರಿಪುರ: ಭಾರೀ ಮಳೆಯಿಂದ ಕನಿಷ್ಠ 1000 ಜನರು ನಿರಾಶ್ರಿತ
Update: 2019-06-04 22:15 IST
ಅಗರ್ತಲಾ, ಜೂ. 4: ತ್ರಿಪುರಾದಲ್ಲಿ ಕಳೆದ 72 ಗಂಟೆಯಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾದ ನೆರೆ ಹಾಗೂ ಬಿರುಗಾಳಿಯಿಂದ 9 ಮಂದಿ ಗಾಯಗೊಂಡಿದ್ದಾರೆ ಹಾಗೂ ಸಾವಿರಕ್ಕೂ ಅಧಿಕ ಜನರು ಮನೆ ಮಾರು ಕಳೆದುಕೊಂಡಿದ್ದಾರೆ.
1,746 ಜನರು 12 ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. 9 ಮಂದಿ ಗಾಯಗೊಂಡಿದ್ದಾರೆ. ಎಲ್ಲರು ಕೂಡ ರಾಜ್ಯದ ಪಶ್ಚಿಮ ತ್ರಿಪುರ ಹಾಗೂ ಸೆಪಹಿಜಾಲಾ ಜಿಲ್ಲೆಗೆ ಸೇರಿದವರು ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ಬಿಡುಗಡೆಗೊಳಿಸಿದ ವರದಿ ಹೇಳಿದೆ.
ಬಿರುಗಾಳಿಯಿಂದ ಪಶ್ಚಿಮದ ನಾಲ್ಕು ಜಿಲ್ಲೆಗಳು, ಸೆಪಹ್ಹಿಜಾಲಾ, ಗೋಮತಿ ಹಾಗೂ ದಕ್ಷಿಣದಲ್ಲಿ 283 ಮನೆಗಳು ಅತ್ಯಧಿಕ, 866 ಮನೆಗಳು ಭಾಗಶಃ ಹಾಗೂ 66 ಮನೆಗಳು ಪೂರ್ಣವಾಗಿ ನಾಶವಾಗಿದೆ ಎಂದು ವರದಿ ಹೇಳಿದೆ. ಹಾನಿ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್, ಪರಿಹಾರ ಕಾರ್ಯಾಚರಣೆ ಆರಂಭಿಸುಂತೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಶೀಘ್ರ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ.