ಮಝಪ್ಫರ್‌ನಗರ ಕೋಮು ಹಿಂಸಾಚಾರ: ಐವರು ಆರೋಪಿಗಳ ಬಂಧನ

Update: 2019-06-04 16:53 GMT

ಹೊಸದಿಲ್ಲಿ, ಜೂ. 4: ಉತ್ತರಪ್ರದೇಶದ ಮುಝಪ್ಫರ್‌ನಗರ ಜಿಲ್ಲೆಯಲ್ಲಿ 2013ರಲ್ಲಿ ನಡೆದ ವ್ಯಕ್ತಿಯೊಬ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ಐದು ಮಂದಿಯನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿಯನ್ನು ಇನ್ನಷ್ಟೇ ಬಂಧಿಸಬೇಕಿದೆ.

 ಆರೋಪಿಗಳಾದ ಪ್ರಹ್ಮಾದ್, ಬಿಶನ್ ಸಿಂಗ್, ತೆಂಡು, ದೇವೆಂದರ್ ಹಾಗೂ ಜಿತೇದರ್ ಅವನ್ನು ಅವರ ಮನೆಯಿಂದ ಪೊಲೀಸರು ಬಂಧಿಸಿದ್ದಾರೆ. ಹಲವು ಬಂಧನಾದೇಶದ ಹೊರತಾಗಿಯೂ ಶರಣಾಗತರಾದ ಬಳಿಕ ಅವರ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಪೊಲೀಸರು ನ್ಯಾಯಾಲಯದ ಆದೇಶ ಕೊಂಡೊಯ್ದಿದ್ದರು.

ಮುಖ್ಯ ನ್ಯಾಯಾಂಗ ದಂಡಾಧಿಕಾರಿ ವಿಪಿನ್ ಕುಮಾರ್ ಅವರ ಮುಂದೆ ಆರೋಪಿಗಳನ್ನು ಹಾಜರುಪಡಿಸಲಾಯಿತು. ವಿಪಿನ್ ಕುಮಾರ್ ಅವರು ಆರೋಪಿಗಳಿಗೆ ಶುಕ್ರವಾರದ ವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ ಎಂದು ದೂರುದಾರ ಪರ ವಕೀಲ ಮೊಹ್ಸಿನ್ ರಝಾ ಝೈದಿ ತಿಳಿಸಿದ್ದಾರೆ. 2013 ಆಗಸ್ಟ್ 27ರಂದು ಮುಝಪ್ಫರ್‌ನಗರದದ ಕವಾಲ್ ಪಟ್ಟಣದಲ್ಲಿ ಆರು ಮಂದಿ ಆರೋಪಿಗಳು ಶಹನವಾಝ್‌ಗೆ ಇರಿದು ಹತ್ಯೆಗೈದಿದ್ದರು. ಇರಿದವರಲ್ಲಿ ಇಬ್ಬರಿಗೆ ಗ್ರಾಮ ನಿವಾಸಿಗಳು ಥಳಿಸಿದ್ದರು.

 ಇದು ಮುಝಪ್ಫರ್‌ಪುರ ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಕೋಮು ಗಲಭೆ ಉಂಟಾಗಲು ಕಾರಣವಾಗಿತ್ತು. ಈ ಕೋಮು ಹಿಂಸಾಚಾರದಲ್ಲಿ 62 ಮಂದಿ ಮೃತಪಟ್ಟಿದ್ದರು. 60 ಸಾವಿರ ಜನರು ನಿರ್ವಸಿತರಾಗಿದ್ದರು. ಶಾಮ್ಲಿ ಹಾಗೂ ಮುಝಪ್ಫರ್‌ಪುರ ಜಿಲ್ಲೆಗಳಲ್ಲಿ ಲೈಂಗಿಕ ಕಿರುಕುಳ ಹಾಗೂ ನಿಂದನೆಯ ಹಲವು ಪ್ರಕರಣಗಳು ವರದಿಯಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News