ಜೂ.11: ಅಲ್ಪ ಸಂಖ್ಯಾತರ ‘ಅರಿವು’ ಯೋಜನೆಯ ಫಲಾನುಭವಿಗಳ ಆಯ್ಕೆಗಾಗಿ ಅದಾಲತ್
ಮಂಗಳೂರು, ಜೂ.4:ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಅರಿವು ಯೋಜನೆಯ ಮೂಲಕ ಇಂಜಿನಿಯರಿಂಗ್,ಮೆಡಿಕಲ್ ಹಾಗೂ ಇತರ ವೃತಿಪರ ವೃತ್ತಿಪರ ಕೋರ್ಸ್‌ಗಳಿಗೆ ಸೇರಿರುವ ವಿದ್ಯಾರ್ಥಿಗಳಿಗೆ ಸರಕಾರದ ಶೈಕ್ಷಣಿಕ ಸಾಲ ಸಹಾಯದ ನೆರವು ಪಡೆಯಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗಾಗಿ ಜೂ.11ರಂದು ಬೆಳಗ್ಗೆ 10ರಿಂದ ಅಪರಾಹ್ನ 1ಗಂಟೆಯವರೆಗೆ ಪಾಂಡೇಶ್ವರದಲ್ಲಿರುವ ನಿಗಮದ ಕಚೇರಿಯಲ್ಲಿ ಅದಾಲತ್ ನಡೆಸಲಾಗುವುದು ಎಂದು ಕರ್ನಾಟಕ ಸರಕಾರದ ಸಂಸದೀಯ ಕಾರ್ಯದರ್ಶಿ ಐವನ್ ಡಿ ಸೋಜ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಕಳೆದ ವರ್ಷ ಈ ಯೋಜನೆಗಾಗಿ ಜಿಲ್ಲೆಯಲ್ಲಿ 1712 ಅರ್ಜಿಗಳು ಸಲ್ಲಿಕೆಯಾಗಿತ್ತು .ಆದರೆ ಈ ಬಾರಿ ಇದುವರೆಗೆ ಕೇವಲ 120ರಿಂದ 200ರಷ್ಟು ಅರ್ಜಿಗಳು ಮಾತ್ರ ಬಂದಿರುತ್ತವೆ.ಈ ಹಿನ್ನೆಲೆಯಲ್ಲಿ ಹೆಚ್ಚಿನ ಫಲಾನುಭವಿಗಳ ಆಯ್ಕೆಗಾಗಿ,ಈ ಯೋಜನೆಯ ಬ ಗ್ಗೆ ಇನ್ನಷ್ಟು ಜನರಿಗೆ ನೆರವು ಒದಗಿಸುವ ಉದ್ದೇಶದಿಂದ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಐವನ್ ಡಿ ಸೋಜ ತಿಳಿಸಿದ್ದಾರೆ.
2018-19ನೆ ಸಾಲಿನಲ್ಲಿ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದಿಂದ 27.08 ಕೋಟಿ ರೂ ಆರ್ಥಿಕ ಸಹಾಯವನ್ನು ವಿವಿಧ ಯೋಜನೆಯ ಮೂಲಕ ನೀಡಲಾಗಿದೆ ಎಂದು ಐವನ್ ಡಿ ಸೋಜ ತಿಳಿಸಿದ್ದಾರೆ.*ರಾಜ್ಯ ದಿಂದ ಬರಪರಿಹಾರಕ್ಕೆ 750 ಕೋಟಿ ರೂ ಅನುದಾನ ಬಿಡುಗಡೆ; ಕೇಂದ್ರದಿಂದ ಯಾವೂದೇ ನರವು ಬಂದಿಲ್ಲಾ:- ರಾಜ್ಯದಿಂದ ಬರಪರಿಹಾರಕ್ಕೆ 750 ಕೋಟಿ ರೂ ಪರಿಹಾರವನ್ನು ತುರ್ತು ಪರಿಹಾರ ಕಾರ್ಯಗಳಿಗಾಗಿ ಬಿಡುಗಡೆ ಮಾಡಲಾಗಿದೆ.ಕೇಂದ್ರ ಸರಕಾರದಿಂದ ರಾಜ್ಯದಲ್ಲಿ ಪರಿಹಾರಕ್ಕೆ 4,500ಕೋಟಿ ರೂ ಅನುದಾನ ಕೋರಿ ಮನವಿ ಸಲ್ಲಿಸಿದ್ದರೂ ಯಾವೂದೇ ರೀತಿಯ ಸ್ಪಂದನ ದೊರೆತಿಲ್ಲ. ಅನುದಾನವೂ ಬಿಡುಗಡೆಯಾಗಿಲ್ಲ.ಇಲ್ಲಿನ ಸಂಸದರೂ ಈ ಬಗ್ಗೆ ಯಾವೂದೇ ಗಮನಹರಿಸಿದಂತೆ ಕಂಡು ಬರುವುದಿಲ್ಲ.ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿ ರಾಜ್ಯದ ವಿಪಕ್ಷ ನಾಯಕರಾದ ಶ್ರೀನಿವಾಸ ಪೂಜಾರಿ ಹಾಗೂ ಬಿಜೆಪಿ ಮುಖಂಡರಾದ ಬಿಜೆಪಿ ಮುಖಂಡರಾದ ಯಡಿಯೂರಪ್ಪ ನೇತೃತ್ವದ ನಿಯೋಗ ಕೇಂದ್ರ ಸರಕಾರಕ್ಕೆ ರಾಜ್ಯದ ಬರದ ಸ್ಥಿತಿಯನ್ನು ವಿವರಿಸಿ ಪರಿಹಾರಕ್ಕೆ ಮನವಿ ಸಲ್ಲಿಸಿ ಅನುದಾನ ಬಿಡುಗಡೆಗೆ ಪ್ರಯತ್ನಿಸಬೇಕು ಎಂದು ಐವನ್ ಡಿ ಸೋಜ ತಿಳಿಸಿದ್ದಾರೆ.
ಇವಿಎಂ ಕಾರ್ಯನಿರ್ವಹಣೆಯ ಸಂಶಯವನ್ನು ನಿವಾರಿಸಲು ಚುನಾವಣಾ ಆಯೋಗ ಮುಂದಾಗಬೇಕು:-
ಈ ಬಾರಿಯ ಲೋಕ ಸಭಾ ಚುನಾವಣೆಯಲ್ಲಿ ಹಾಗೂ ಬಳಿಕ ನಡೆದ ಸ್ಥಳಿಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ.ಸ್ಥಳಿಯಾಡಳಿತ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಗರಿಷ್ಠ ಸ್ಥಾನಗಳನ್ನು ಪಡೆದಿದೆ.ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಜನರಲ್ಲಿರುವ ಸಂಶಯ ನಿವಾರಣೆಗಾಗಿ ಮುಂದಿನ ದಿನಗಳಲ್ಲಿ ಮತ್ತೆ ಬ್ಯಾಲೆಟ್ ಪೇಪರ್ ಬಳಕೆ ಮಾಆಡಬೇಕು ಎಂದು ಐವನ್ ಡಿ ಸೋಜ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಸರಕಾರವನ್ನು ಅಸ್ಥಿರಗೊಳಿಸುವ ಯತ್ನ ಬೇಡ:- ರಾಜ್ಯದಲ್ಲಿ ವಿಪಕ್ಷ ಸ್ಥಾನದಲ್ಲಿರುವ ಬಿಜೆಪಿ ರಾಜ್ಯದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರವನ್ನು ಅಸ್ಥಿರಗೊಳಿಸುವ ಯತ್ನದಲ್ಲಿ ತೊಡಗಿದೆ.ಲೋಕ ಸಭೆಯ ಚುನಾವಣೆಯಲ್ಲಿ ದೇಶದಲ್ಲಿ 12.5 ಕೋಟಿ ಜನ ಕಾಂಗ್ರೆಸ್ ಪರವಾಗಿ ಮತಚಲಾಯಿಸಿದ್ದಾರೆ.ಬಳಿಕ ನಡೆದ ಸ್ಥಳೀಯಾಡಳಿತ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇ 46ರಷ್ಟು ಸೀಟುಗಳು ಕಾಂಗ್ರೆಸ್‌ಗೆ ದೊರಕಿದೆ ಈ ಹಿನ್ನೆಲೆಯಲ್ಲಿ ಬಿಜೆಪಿ ಅನಗತ್ಯವಾಗಿ ರಾಜ್ಯದಲ್ಲಿಸಮ್ಮಿಶ್ರ ಸರಕಾರವನ್ನು ಉರುಳಿಸುವ ಕನಸು ಕಾಣೂವ ಅಗತ್ಯವಿಲ್ಲ ಎಂದು ಐವನ ಡಿ ಸೋಜ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ನಾಗೇಂದ್ರ,ಆಶಾ ಡಿ ಸಿಲ್ವ ಮೊದಲಾದವರು ಉಪಸ್ಥಿತರಿದ್ದರು.