×
Ad

ಈದುಲ್ ಫಿತ್ರ್ ಹಬ್ಬಕ್ಕೆ ಪ್ರಧಾನಿ ಶುಭಾಶಯ

Update: 2019-06-05 12:40 IST

ಹೊಸದಿಲ್ಲಿ, ಜೂ.5: ಎಲ್ಲೆಡೆ ಇಂದು ಈದುಲ್ ಫಿತ್ರ್ ಹಬ್ಬ ಆಚರಿಸುತ್ತಿರುವ ಸರ್ವರಿಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.

ತನ್ನ ಟ್ವಿಟರ್‌ನಲ್ಲಿ ಇಂಗ್ಲೀಷ್ ಹಾಗೂ ಉರ್ದುವಿನಲ್ಲಿ ಈದುಲ್ ಫಿತ್ರ್‌ಗೆ ಶುಭಾಶಯಗಳು ಎಂದು ಸಂದೇಶವನ್ನು ಬರೆದಿರುವ ಮೋದಿ, ಸಂದೇಶದ ಕೆಳಗೆ ತನ್ನ ಸಹಿ ಹಾಕಿದ್ದಾರೆ.

ಈ ವಿಶೇಷ ದಿನ ಸಮಾಜದಲ್ಲಿ ಸೌಹಾರ್ದತೆ, ಸಹಾನುಭೂತಿ ಹಾಗೂ ಶಾಂತಿಯನ್ನು ನಿರ್ಮಿಸಲಿ. ಎಲ್ಲರೂ ಸುಖ-ಸಂತೋಷವನ್ನು ಪಡೆಯಲಿ ಎಂದು ಪ್ರಧಾನಿ ಶುಭ ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News