ಪೇರಡ್ಕ ಮಸೀದಿಯಲ್ಲಿ ಈದುಲ್ ಫಿತ್ರ್
Update: 2019-06-05 17:27 IST
ಮಂಗಳೂರು, ಜೂ.5: ಪೇರಡ್ಕ ಮುಹ್ಯದ್ದೀನ್ ಜುಮ್ಮಾ ಮಸೀದಿಯಲ್ಲಿ ಈದುಲ್ ಫಿತ್ರ್ ಆಚರಿಸಲಾಯಿತು.ಜುಮ್ಮಾ ಮಸೀದಿ ಖತೀಬರಾದ ಅಶ್ರಫ್ ಫೈಝಿ ಯವರ ನೇತೃತ್ವದಲ್ಲಿ ಈದ್ ನಮಾಝ್ ನಡೆಯಿತು .ಬಳಿಕ ಮಖಾಂ ಝಿಯಾರತ್ ಹಾಗೂ ಮರಣ ಹೊಂದಿದವರಿಗೆ ಖಬರ್ ಝಿಯಾರತ್ ನಡೆಯಿತು .ಕೆ.ಪಿಸಿ.ಸಿ.ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್ ,ಜುಮ್ಮಾ ಮಸೀದಿ ಅಧ್ಯಕ್ಷ ಅರೀಫ್ ತೆಕ್ಕಲ್,ಕಾರ್ಯದರ್ಶಿ ಉಮ್ಮರ್ ಪಿ.ಕೆ,ಎಮ್ .ಆರ್.ಡಿ.ಎ.ಅಧ್ಯಕ್ಷ ಹಕೀಂ ದರ್ಖಾಸ್ ,ಎಸ್ .ಕೆ.ಎಸ್ .ಎಸ್ .ಎಫ್ .ಗೂನಡ್ಕ ಶಾಖೆ ಅಧ್ಯಕ್ಷ ಮುನೀರ್ ದಾರಿಮಿ,ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಕೆ.ಹಮೀದ್,ಅಬ್ದುಲ್ ಖಾದರ್ ಮೊಟ್ಟಂಗಾರ್,ತಾಜುದ್ದೀನ್ ಟರ್ಲಿ, ಉಪಸ್ಥಿತರಿದ್ದರು .ಸಿಹಿತಿಂಡಿ ನೀಡಿ ಈದ್ ಫಿತ್ರ್ ಹಬ್ಬ ಆಚರಿಸಿದರು.