ಹಿದಾಯತ್ ನಗರ: ಈದುಲ್ ಫಿತರ್
Update: 2019-06-05 17:45 IST
ಮಂಗಳೂರು, ಜೂ.5: ಕೋಟೆಕಾರ್ ಹಿದಾಯತ್ ನಗರ ಅಲ್ ಹಿದಾಯ ಜುಮಾ ಮಸ್ಜಿದ್ ಸಂಭ್ರಮ ಸಡಗರದಿಂದ ಈದ್ ಉಲ್ ಫಿತರ್ ಆಚರಿಸಲಾಯಿತ.
ಬಹು ಅಹ್ಮದ್ ಕಬೀರ್ ಸಅದಿ ಉಳ್ಳಾಲ ಖುತುಬಾ ಪಾರಾಯಣ ಹಾಗೂ ಈದ್ ನಮಾಝ್ ನೇತೃತ್ವ ವಹಿಸಿದರು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಫ್ ಹಿದಾಯತ್ ನಗರ ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದಲ್ಲಿ ಎನ್.ಎಸ್ ಉಮರ್ ಮಾಸ್ಟರ್ ಬಹು ಅಬ್ಬುಲ್ ಅಝೀಝ್ ಸಖಾಫಿ, ಉಳ್ಳಾಲ ಎಸ್ಸೆಸ್ಸೆಫ್ ಸೆಕ್ಟರ್ ಕೋಶಾಧಿಕಾರಿ ಜಿ.ಎ ಇಬ್ರಾಹಿಮ್, ಉಳ್ಳಾಲ ಪೊಲೀಸ್ ಠಾಣೆ ಸಿಬ್ಬಂದಿ ಸಹಿತ ಹಲವಾರು ಮಂದಿ ಭಾಗವಹಿಸಿದರು. ಎಸ್ಸೆಸ್ಸೆಫ್ ಕಾರ್ಯದರ್ಶಿ ಲಿಬಾನ್ ಮರ್ಝಾಕಿ ವಂದಿಸಿದರು