ಕಾಪು ತಾಲೂಕಿನಲ್ಲಿ ಸಂಭ್ರಮದ ಈದ್

Update: 2019-06-05 17:29 GMT

ಪಡುಬಿದ್ರಿ: ಮುಸ್ಲಿಮರ ಪವಿತ್ರ ಈದುಲ್ ಫಿತ್ರ್ ಹಬ್ಬವನ್ನು ಪಡುಬಿದ್ರಿ, ಕಾಪು ಪರಿಸರದಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ತಾಲೂಕಿನ ಮೂಳೂರು ಜುಮ್ಮಾ ಮಸ್ಜಿದ್, ಕಾಪು ಪೊಲಿಪು ಜುಮಾ ಮಸ್ಜಿದ್, ಪೈಯ್ಯಾರ್ ಜುಮ್ಮಾ ಮಸ್ಜಿದ್, ಕಟಪಾಡಿ ಜುಮ್ಮಾ ಮಸ್ಜಿದ್, ಮಣಿಪುರ ಜುಮ್ಮಾ ಮಸ್ಜಿದ್, ಶಿರ್ವ ಸುನ್ನೀ ಜಾಮಿಯಾ ಮಸ್ಜಿದ್, ಶಿರ್ವ ಮಸ್ಜಿದ್ ಎ ಬಿಲಾಲ್, ಪಲಿಮಾರು ಇನ್ನಾ ಜುಮ್ಮಾ ಮಸ್ಜಿದ್, ಪಡುಬಿದ್ರೆ ಜುಮ್ಮಾ ಮಸ್ಜಿದ್, ಕನ್ನಂಗಾರ್ ಜುಮ್ಮಾ  ಮಸ್ಜಿದ್, ಮುದರಂಗಡಿ ಸುನ್ನೀ ಜುಮ್ಮಾ ಮಸ್ಜಿದ್, ಎಲ್ಲೂರು ದಾರುಲ್ ಅಮಾನ್, ಎರ್ಮಾಳ್ ಜುಮ್ಮಾ ಮಸ್ಜಿದ್, ಉಚ್ಚಿಲ ಖದೀಮ್ ಹನಫಿ ಜಾಮಿಯಾ ಮಸ್ಜಿದ್, ಉಚ್ಚಿಲ ಮಸ್ಜಿದ್ ಎ ಅನಾಫ್, ಕೊಂಬಗುಡ್ಡೆ ಜದೀದ್ ಕಲಾನ್ ಮಸ್ಜಿದ್, ಕೊಂಬಗುಡ್ಡೆ ಗೌಸಿಯ ಜುಮ್ಮಾ ಮಸ್ಜಿದ್, ಮಲ್ಲಾರು ಮುಸೈಬ್ ಬಿನ್ ಉಮೆರ್ ಸಲಫಿ ಮಸ್ಜಿದ್, ಮಲ್ಲಾರ್ ಖದೀಮ್ ಜಾಮೀಯ ಮಸ್ಜಿದ್, ಮಲ್ಲಾರ್ ಮಜೂರು ಬದ್ರಿಯಾ ಜುಮ್ಮಾ ಮಸ್ಜಿದ್, ಮಲ್ಲಾರ್ ಅಹ್ಮದಿ ಮೊಹಲ್ಲಾ ಅಹ್ಲೆ ಸುನ್ನತ್‍ವಲ್ ಜಮಾಅತ್, ಬೆಳಪು ವಿನಯ ನಗರ ಬದ್ರಿಯಾ ಜುಮ್ಮಾ  ಮಸ್ಜಿದ್, ಫಕೀರ್ಣಕಟ್ಟೆ ಮುಹಿಯುದ್ದೀನ್ ಜುಮ್ಮಾ ಮಸ್ಜಿದ್, ಬೆಳಪು ಮಿನಾರ ಜಾಮಿಯ ಮಸ್ಜಿದ್, ಕಟಪಾಡಿ ಸರಕಾರಿಗುಡ್ಡೆ ಜುಮ್ಮಾ ಮಸ್ಜಿದ್, ಉಚ್ಚಿಲ ಭಾಸ್ಕರ ನಗರ ಜುಮ್ಮಾ ಮಸ್ಜಿದ್ ಸಹಿತ ವಿವಿಧೆಡೆಗಳ ಮಸೀದಿಗಳಲ್ಲಿ ಸಾವಿರಾರು ಮಂದಿ ಸಾಮೂಹಿಕವಾಗಿ ನಮಾಜ್ ನೆರವೇರಿಸಿದರು. 

ಮುಸ್ಲಿಮ್ ಬಾಂಧವರು ಬೆಳಗ್ಗೆ ಮಸೀದಿಗೆ ತೆರಳಿ ಈದ್  ನಮಾಜ್ ನಿರ್ವಹಿಸಿದರು. ಆ ಬಳಿಕ ಸಾಮೂಹಿಕ ಪ್ರಾರ್ಥನೆ ನಡೆಯಿತು. ಬಳಿಕ ಪರಸ್ಪರ ಈದ್ ಶುಭಾಶಯಗಳನ್ನು ಕೋರಿದರು. 

ಮಾಧಕ ವ್ಯಸನದಿಂದ ದೂರವಾಗಲು ಕರೆ: ಪಡುಬಿದ್ರಿ ಜುಮ್ಮಾ ಮಸೀದಿಯಲ್ಲಿ ಈದ್ ಸಂದೇಶ ನೀಡಿದ ಖತೀಬ್ ಹಾಜಿ ಎಸ್.ಎಂ. ಅಬ್ದುಲ್ ರಹ್ಮಾನ್ ಮದನಿ, ಇತ್ತೀಚಿನ ದಿನಗಳಲ್ಲಿ ಯುವಜನತೆ ಮಾದಕ ವ್ಯಸನಗಳ ದಾಸರಾಗುತಿದ್ದಾರೆ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ. ಮಾದಕ ವ್ಯಸನದ ದಾಸರಾಗುವುದರಿಂದ ಸಮಾಜದಲ್ಲಿ ಅಹಿತಕರ ಘಟನೆಗಳಿಗೆ ಕಾರಣವಾಗುತ್ತಿದೆ. ಅಲ್ಲದೆ  ಆರೋಗ್ಯವವೂ ಕೆಡುತ್ತದೆ. ಈ ಬಗ್ಗೆ ಯುವ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News