×
Ad

ಜೂ.10ರಿಂದ ಮಲ್ಲಂಪಳ್ಳಿ ದೇವದ ಬ್ರಹ್ಮಕಲಶೋತ್ಸವ

Update: 2019-06-07 20:05 IST

ಉಡುಪಿ, ಜೂ.7: ಇತಿಹಾಸ ಪ್ರಸಿದ್ಧ ಮಲ್ಲಂಪಳ್ಳಿ ಶ್ರೀವಿಷ್ಣುಮೂರ್ತಿ ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾ, ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಜೂ.10ರಿಂದ 15ರ ವರೆಗೆ ದೇವಳದ ಆವರಣದಲ್ಲಿ ಜರಗಲಿದೆ.

 ಕಾಣಿಯೂರು ಮಠದ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ವಿದ್ವಾನ್ ಹೆರ್ಗ ಜಯರಾಮ ತಂತ್ರಿಗಳ ನೇತೃತ್ವದಲ್ಲಿ ಆರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಳ ಬ್ರಹ್ಮಕಲ ಶೋತ್ಸವ ಸಮಿತಿಯ ಕಾರ್ಯದರ್ಶಿ ವಾಸುದೇವ ಭಟ್ ಪೆರಂಪಳ್ಳಿ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

12ರಂದು ಬೆಳಿಗ್ಗೆ 9:02ಕ್ಕೆ ವಿಷ್ಣುಮೂರ್ತಿ ದೇವರ ಪುನಃಪ್ರತಿಷ್ಠೆ, ಅಷ್ಟಬಂಧ ಸ್ಥಾಪನೆ ಹಾಗೂ 15ರಂದು ಬ್ರಹ್ಮಕಲಶಾಭಿಷೇಕ, ಮಹಾಪೂಜೆ ನಡೆಯಲಿದೆ. ಅಂದು ಮಧ್ಯಾಹ್ನ 1ಗಂಟೆಗೆ ಮಹಾಅನ್ನಸಂತರ್ಪಣೆ ಜರಗಲಿದೆ. ಮುಜರಾಯಿ ಇಲಾಖೆಯ ಸಿ ದರ್ಜೆಯಡಿಯಲ್ಲಿ ಬರುವ ಈ ದೇವಳವನ್ನು ಸುಮಾರು 80ಲಕ್ಷ ರೂ.ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ದೇಗುಲದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಂ. ಶ್ರೀನಿವಾಸಬಲ್ಲಾಳ್, ಉಪಾಧ್ಯಕ್ಷ ಎಸ್.ವಿ.ಭಟ್, ಕೃಷ್ಣ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News