ಉಡುಪಿ: ಜೂ.8ರಂದು ಮಳೆಗಾಗಿ ಕಪ್ಪೆಗಳಿಗೆ ಮದುವೆ !
Update: 2019-06-07 20:10 IST
ಉಡುಪಿ, ಜೂ.7: ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಹಾಗೂ ಪಂಚರತ್ನಾ ಸೇವಾ ಟ್ರಸ್ಟ್ ವತಿಯಿಂದ ಜಲಕ್ಷಾಮದ ನಿವರಾಣಾರ್ಥ ಹಾಗೂ ಮಳೆಗಾಗಿ ಕಪ್ಪೆಗಳಿಗೆ ಮದುವೆ ಕಾರ್ಯಕ್ರಮವನ್ನು ಜೂ.8ರಂದು ಅಪರಾಹ್ನ 12 ಗಂಟೆಗೆ ಉಡುಪಿ ಕಿದಿಯೂರ್ ಹೋಟೆಲ್ ವಾಹನ ನಿಲುಗಡೆ ಪ್ರಾಂಗಣ ದಲ್ಲಿ ಆಯೋಜಿಸಲಾಗಿದೆ.
ಬೆಳಗ್ಗೆ 11ಗಂಟೆಗೆ ನಗರದ ಮಾರುತಿ ವಿಥಿಕಾದಲ್ಲಿರುವ ನಾಗರಿಕ ಸಮಿತಿಯ ಕಚೇರಿಯಿಂದ ಮದುವೆ ದಿಬ್ಬಣ ಹೊರಟು, ಹಳೆ ಡಯಾನ ವೃತ್ತ, ಕವಿ ಮುದ್ದಣ ಮಾರ್ಗದ ಮೂಲಕ ಸಾಗಿ ಉಡುಪಿ ಕಿದಿಯೂರ್ ಹೋಟೆಲ್ ವಾಹನ ನಿಲುಗಡೆ ಪ್ರಾಂಗಣದಲ್ಲಿ ಸೇರಲಿದೆ.
ಮದುವೆಗಾಗಿ ಅಹ್ವಾನ ಪತ್ರಿಕೆಯನ್ನು ತಯಾರಿಸಲಾಗಿದ್ದು, ಇದರಲ್ಲಿ ಕೊಳಲ ಗಿರಿ ಕೀಳಿಂಜೆಯ ಸುಪುತ್ರಿಯಾದ ಚಿ ಸೌ-ವರ್ಷ ಹೆಸರಿನ ಹೆಣ್ಣು ಕಪ್ಪೆ ಮತ್ತು ಉಡುಪಿ ಕಲ್ಸಂಕದ ಸುಪುತ್ರ ಚಿ-ವರುಣ ಹೆಸರಿನ ಗಂಡು ಕಪ್ಪೆ ಇವರ ವಿವಾಹ ಮಹೋತ್ಸವ ನಡೆಯಲಿದೆ ಎಂದು ನಮೂದಿಸಲಾಗಿದೆ.
ಕೊನೆಯಲ್ಲಿ ಮಳೆಗಾಗಿ ಪ್ರಾರ್ಥನೆಯೇ ಉಡುಗೊರೆ ಎಂದು ಉಲ್ಲೇಖಿಸಲಾಗಿದೆ.