ಜು. 8ರಂದು ಕೇರಳಕ್ಕೆ ಮುಂಗಾರು?

Update: 2019-06-07 14:53 GMT

ಉಡುಪಿ, ಜೂ.7: ಬಹು ನಿರೀಕ್ಷಿತ ನೈರುತ್ಯ ಮಾನ್ಸೂನ್ ಶನಿವಾರ ಕೇರಳವನ್ನು ಪ್ರವೇಶಿಸುವ ಬಗ್ಗೆ ತಿರುವನಂತಪುರಂನಲ್ಲಿರುವ ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದ್ದು, ಮುಂಗಾರು ಪೂರ್ವ ಮಳೆ ಈ ಬಾರಿ ಸಂಪೂರ್ಣ ವಾಗಿ ಕೈಕೊಟ್ಟ ಬಳಿಕ ಕರ್ನಾಟಕ ಕರಾವಳಿಯ ಜನತೆ ಕಳೆದೊಂದು ತಿಂಗಳಿ ನಿಂದ ಚಾತಕಪಕ್ಷಿಯಂತೆ ಕಾಯುತಿದ್ದ ಮುಂಗಾರು ಮಳೆ ಶೀಘ್ರವೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲೂ ಪ್ರಾರಂಭಗೊಳ್ಳುವ ನಿರೀಕ್ಷೆ ಗರಿಕೆದರಿದೆ.

ಶುಕ್ರವಾರ ಸಂಜೆ 6 ಗಂಟೆಯಿಂದ ಮುಂದಿನ 24 ಗಂಟೆಗಳಲ್ಲಿ ನೈರುತ್ಯ ಮಾನ್ಸೂನ್ ಕೇರಳಕ್ಕೆ ಕಾಲಿರಿಸುವ ಸಾಧ್ಯತೆ ಇದ್ದು, ಕೇರಳ, ಕರ್ನಾಟಕ ಕರಾವಳಿ ಹಾಗೂ ಲಕ್ಷದ್ವೀಪಗಳ ಎಲ್ಲಾ ಬಂದರುಗಳು ಎಚ್ಚರಿಕೆಯಿಂದ ಇರುವಂತೆ ತಿರುವನಂತಪುರಂ ಹವಾಮಾನ ಕೇಂದ್ರದ ಸೈಕ್ಲೋನ್ ವಾರ್ನಿಂಗ್ ಸೆಂಟರ್‌ನ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News