ಉಡುಪಿಯ ಶಾಲೆಗಳಲ್ಲಿ ನೀರಿನ ಸಮಸ್ಯೆ ಇಲ್ಲ: ಡಿಡಿಪಿಐ ಸ್ಪಷ್ಟನೆ
Update: 2019-06-07 20:26 IST
ಉಡುಪಿ, ಜೂ.7: ಉಡುಪಿ ವಲಯದಲ್ಲಿರುವ ಸರಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ನೀರಿನ ಸಮಸ್ಯೆಯಿಂದಾಗಿ ಶುಕ್ರವಾರ ಯಾವುದೇ ಶಾಲೆಯನ್ನು ಮುಚ್ಚಿರುವುದಿಲ್ಲ ಹಾಗೂ ಉಡುಪಿ ವಲಯದ ಎಲ್ಲಾ ಶಾಲೆಗಳಲ್ಲಿ ಶಾಲಾ ಪರಿಸರದ ಪಂಚಾಯತ್ ಅಥವಾ ಆಸುಪಾಸಿನವರ ಸಹಾಯದಿಂದ ನೀರಿನ ವ್ಯವಸ್ಥೆ ಮಾಡಿಕೊಂಡು ಎಂದಿನಂತೆ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ಡಿಡಿಪಿಐ ಶೇಷಶಯನ ಕಾರಿಂಜ ಸ್ಪಷ್ಟಪಡಿಸಿದ್ದಾರೆ.
ಪ್ರತಿದಿನ ಶಾಲೆಗಳಲ್ಲಿ ಬೆಳಗ್ಗೆ 9:30ರಿಂದ ಸಂಜೆ 4:15ರವೆಗೆ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿದ್ದು, ನೀರಿನ ಕೊರತೆಯಿಂದ ಮಧ್ಯಾಹ್ನದ ನಂತರ ಯಾವುದೇ ಶಾಲೆಗಳಿಗೆ ರಜೆ ನೀಡಿರುವುದಿಲ್ಲ ಎಂದು ಉಡುಪಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ತಿಳಿಸಿದ್ದಾರೆ.