ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ವಿವಾದ: ಸೌಹಾರ್ದಯುತ ಪರಿಹಾರಕ್ಕೆ ಬ್ರಾಹ್ಮಣ ಒಕ್ಕೂಟ ಆಗ್ರಹ
Update: 2019-06-07 20:31 IST
ಮಂಗಳೂರು, ಜೂ.7: ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಸಂಪುಟ ನರಸಿಂಹ ಮಠದಲ್ಲಿನ ಇತ್ತೀಚಿನ ವಿದ್ಯಮಾನಗಳು ಸೌಹಾರ್ದಯುತ ಹಾಗೂ ನ್ಯಾಯಯುತವಾಗಿ ಇತ್ಯರ್ಥಗೊಳ್ಳಲಿ ಎಂದು ಬ್ರಾಹ್ಮಣ ಒಕ್ಕೂಟ ಆಗ್ರಹಿಸಿದೆ.
ಬ್ರಾಹ್ಮಣ ಒಕ್ಕೂಟದ ಪರವಾಗಿ ಎಸ್. ಪ್ರದೀಪ ಕುಮಾರ ಕಲ್ಕೂರ, ಹರಿಕೃಷ್ಣ ಪುನರೂರು, ಶರವು ರಾಘವೇಂದ್ರ ಶಾಸ್ತ್ರಿ ಮತ್ತಿತರರು ಸೂಕ್ತ ಕ್ರಮಕ್ಕಾಗಿ ದ.ಕ.ಜಿಲ್ಲಾಧಿಕಾರಿಯನ್ನು ಮನವಿ ಮಾಡಿದ್ದಾರೆ.