ನೀಟ್ ಪರೀಕ್ಷೆ: ಆಳ್ವಾಸ್ ಪಿಯು ಕಾಲೇಜಿನ 58 ಮಂದಿಗೆ 500ಕ್ಕೂ ಅಧಿಕ ಅಂಕ

Update: 2019-06-07 15:29 GMT

ಮೂಡುಬಿದಿರೆ: ನೀಟ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ 58 ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕ ಗಳಿಸಿದ್ದು ಈ ಪೈಕಿ ಮೂರು ಮಂದಿ 600ಕ್ಕಿಂತಲೂ ಅಧಿಕ ಅಂಕ ಗಳಿಸುವ ಮೂಲಕ ಅತ್ಯತ್ತಮ ಸಾಧನೆ ಮೆರೆದಿದ್ದಾರೆ. ಒಟ್ಟಾರೆ ಫಲಿತಾಂಶದಲ್ಲಿ 500ಕ್ಕೂ ಅಧಿಕ ಮಂದಿ ಎಂ.ಬಿ.ಬಿ.ಎಸ್ ಡೆಂಟಲ್ ಹಾಗೂ ಆಯುಷ್ ವೈದ್ಯಕೀಯ ವಿಭಾಗದಲ್ಲಿ ಸರ್ಕಾರಿ ಕೋಟಾದಲ್ಲಿ ಪ್ರವೇಶ ಪಡೆಯುವ ಅರ್ಹತೆ ಹೊಂದಿದ್ದಾರೆ. 

400 ರಿಂದ 499 ಅಂಕದವರೆಗೆ 226, 358-399 ಂಕದವರೆಗೆ 210 ಹಾಗೂ 300 ರಿಂದ 350 ರಲ್ಲಿ 301 ವಿದ್ಯಾರ್ಥಿಗಳು ಅಂಕ ಗಳಿಸಿದ್ದಾರೆ. ವಿಕಲಚೇತನರ ಕೆಟಗರಿಯಲ್ಲಿ ಯಶಸ್ ಕೆ ದೇಶದಲ್ಲೇ 54 ನೇ ರ್ಯಾಂಕ್ ಗಳಿಸಿದ್ದಾರೆ. ಹಾಸನದ ಕೃಷ್ಣ ಶೆಟ್ಟಿಯವರ ಪುತ್ರನಾಗಿದ್ದು ಪ್ರತಿಷ್ಠಿತ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಗೆ ಪ್ರವೇಶ ಪಡೆಯುವ ಅರ್ಹತೆ ಹೊಂದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

500ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳು:

ಪವನ್ ಶಿವಬಸಪ್ಪ ಅಂಗಡಿ-604, ಅರುಣ್ ಕೆ.ಎಂ-603, ಆಶ್ರಯ್ ಜೈನ್ 600, ದರ್ಶನ್ ಸಮರ್ಥ-597, ಅಜಯ್ ಡಿ.ಯು-591, ಗೌತಮ್ ಜಿ.ಎಂ-584, ನಿತಿನ್ ಬಳ್ಳಾರಿ 578, ರಾಜಶೇಖರ್ ಮೂರ್ತಿ ಜಿ.ಎಸ್-577, ಶ್ರೇಯಾಂಕ್ ಶ್ರೀಧರ್ ಶೇಟ್-577, ಸೃಷ್ಟಿ ಎಸ್.ಕುಮಾರ್-575, ಹಿತೇಶ್‍ಪಾಲ್ ಜೈನ್-572, ಕುಶಾಲ್ ಎ.-569, ಎಂ. ರಾಘವೇಂದ್ರ ರೆಡ್ಡಿ-569, ಅಡಿವೆಪ್ಪ ಜಬಶೆಟ್ಟಿ-567, ಸಂದೀಪ್ ಗೌಡ ಕೆ.ಬಿ-564, ಸತೀಶ್ ಕುಮಾರ್-564, ಶೋಯೆಬ್ ಅಕ್ತಾರ್-562, ವೇಣುಗೋಪಾಲ್ ಕೆ.ಆರ್-561, ರಂಜನ್ ಸಿ.ಎಂ -559, ಮನೋಜ್ ಆರ್. ಕೇರೂರು-557, ಶ್ರೀಧರ್ ನ್ಯಾಮಗೌಡ-553, ಬಾಲಾಜಿ ನಾಯ್ಡು ವಿ.-553, ಸ್ಫೂರ್ತಿ ಡಿ.ಎಸ್ -552, ಹೇಮಲತಾ ಎಂ-552, ಭುವನಾ ಕೆ.ಎನ್-548, ಕಾರ್ತಿಕ್ ಜಿ.ಸಿ-547, ದೀಪಿಕಾ ಎಚ್.ಎಸ್-544, ಸೃಷ್ಟಿ ಎಸ್. ಕೊಡ್ಲೆರ್ -540, ಕುಶಲ್ ಎಸ್.ಡಿ-540, ನಿಶ್ಮಿತಾ ಎಸ್.ಎನ್-539, ಕಿರಣ್ ಎಚ್.ಡಿ-539, ಚೇತನ್ ಕೆ-537, ಪುರುಷೋತ್ತಮ್ ಕೆ.-532, ಜೀವನ್ ಕುಮಾರ್ ಜಿ.ಎಸ್-529, ದೀಕ್ಷಾ ಎಂ.ಎನ್-522, ಮನೋಹರ ಜೆ.-522, ರತ್ನಾ ಬಡಿಗೆರ್-520, ಶಮಂತ್ ಗೌಡ ಸಿ.-519, ಮಯೂರ್.ವಿ-519, ಪ್ರಸಾದ್ ವಾಗಮೋಡ್-519, ಮಂಜೂಶ್ರೀ-518, ಸಂಜನಾ ಬಿ.-516, ತೇಜಸ್ವಿನಿ ಆರ್.-516, ಮಹೇಶ್ ಎಂ. ಕುಂಪಳಿ-515, ವೈ ಲಿಖಿತಾ ಗೌಡ-514, ಮಂಜುನಾಥ್ ವಿ.ಸಿ-512, ಜಯಶ್ರೀ ಎನ್.-509, ಮೇಘನಾ ಮಹಾದೇವ್-509, ಸಿಂಚನಾ ಉಡುಪ ಎಚ್.ಆರ್-508, ಹೇಮಾವತಿ ಮಂಜುನಾಥ್ ಮೊಗೇರ-508, ರಾಜೇಶ್-507, ಕಿರಣ್ ಕುಮಾರ್-507, ವೆಂಕಟೇಶಲು ಎಂ.-506, ಸುಚಿತ್ರಾ ಎ.ಎಸ್-506, ಬಸವರಾಜ್ ಯಲಿಶಿರುಂಡು-502, ಸಂಕೇತ್ ಜೆ.ಎ-502, ಚಿತ್ರಶಾರಿ ಪಿ.-500, ವೈಷ್ಣವಿ ಸತೀಶ್ ಶಾನುಬೋಗ್-500 ಅಂಕಗಳನ್ನು ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.

ನೀಟ್ ಸಂಯೋಜಕ ವೆಂಕಟೇಶ್ ನಾಯಕ್, ಆಳ್ವಾಸ್ ಸಂಸ್ಥೆಯ ಪಿ.ಆರ್.ಒ ಡಾ.ಪದ್ಮನಾಭ ಶೆಣೈ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News