×
Ad

ಕುಂದಾಪುರ: ಅಂಗನವಾಡಿಗೆ ಆಯ್ಕೆ ಪಟ್ಟಿ ಪ್ರಕಟ

Update: 2019-06-07 21:58 IST

ಉಡುಪಿ, ಜೂ.7: ಶಿಶು ಅಭಿವೃದ್ಧಿ ಯೋಜನೆ ಕುಂದಾಪುರ ವ್ಯಾಪ್ತಿಯ ಉರ್ದುಶಾಲೆ ಗುಡ್ಡೆಕೇರಿ, ಹಳ್ಳಿಹೊಳೆ, ಹೊಂಬಾಡಿ ಮಂಡಾಡಿ ಅಂಗನವಾಡಿ ಕೇಂದ್ರಗಳಿಗೆ ಕಾರ್ಯಕರ್ತೆಯರನ್ನು ಹಾಗೂ ಕಾಸಾಡಿ, ಗಾವಳಿ, ವಂಡ್ಸೆ, ಕೋಣಿ-1, ಗಂಗನಾಡು, ಸಲಗೇರಿ, ರಾಮಮಂದಿರ, ಉರ್ದುಶಾಲೆ ಗುಡ್ಡೆಕೇರಿ, ಕಾಳಾವರ-1 ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯರನ್ನು ಗುರುತಿಸಿ, ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಿದೆ.

ಈ ಆಯ್ಕೆ ಪಟ್ಟಿಯ ಬಗ್ಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಜೂ.13ರ ಒಳಗೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ ಕುಂದಾಪುರ ಇಲ್ಲಿಗೆ ಲಿಖಿತವಾಗಿ ದೂರು ನೀಡುವಂತೆ ಕುಂದಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News