ಬೀಡಿ ಕಾರ್ಮಿಕರ ಮಗಳಿಗೆ ಧನಸಹಾಯ
Update: 2019-06-07 22:03 IST
ಉಡುಪಿ, ಜೂ.7: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿ ನಡೆಸಿದ ದ್ವಿತೀಯ ಪಿ.ಯು. ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 6ನೇ ಸ್ಥಾನ ಗಳಿಸಿದ ಸ್ನೇಹಾರನ್ನು ಕೇಂದ್ರ ಕಾರ್ಮಿಕ ಕಲ್ಯಾಣ ಇಲಾಖಾ ವತಿಯಿಂದ ಇತ್ತೀಚೆಗೆ ಅಭಿನಂದಿಸಲಾಯಿತು.
ಉಪ್ಪಿನಂಗಡಿಯಲ್ಲಿ ವಾಸವಾಗಿರುವ ಸ್ನೇಹ ಪೋಷಕರು ಬೀಡಿ ಕಾರ್ಮಿಕ ರಾಗಿದ್ದು, ಸ್ನೇಹಾರ ಮುಂದಿನ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಕಾರ್ಮಿಕ ಕಲ್ಯಾಣ ಆಯುಕ್ತ ಕೆ. ಶೇಖರ್ ತಾವು ಹಾಗೂ ತಮ್ಮ ಇಲಾಖಾ ಸಿಬ್ಬಂದಿಗಳ ಸಹಕಾರದೊಂದಿಗೆ 20,000 ರೂ.ಗಳನ್ನು ಸಂಗ್ರಹಿಸಿದರು.
ಉಡುಪಿ ಹಾಗೂ ದಕ್ಷಿಣ ಕನ್ನಡ ಮುಖ್ಯ ವೈದ್ಯಾಧಿಕಾರಿ ಡಾ. ರಾಮಕೃಷ್ಣ ಭಟ್ 20,000 ರೂ. ನಗದನ್ನು ಸ್ನೇಹರಿಗೆ ವಿತರಿಸಿದರು. ಈ ಸಂದರ್ದಲ್ಲಿ ಉಪ್ಪಿನಂಗಡಿ ಬೀಡಿ ಕಾರ್ಮಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಿಝ್ವಾನ್ ಮತ್ತಿತರರು ಉಪಸ್ಥಿತರಿದ್ದರು.