×
Ad

ವಾರಸುದಾರರಿಗೆ ಸೂಚನೆ

Update: 2019-06-07 22:05 IST

ಉಡುಪಿ, ಜೂ.7: ಕಳೆದ ಜೂ.2ರಂದು ರಥಬೀದಿಯ ಪಲಿಮಾರು ಮಠದ ಎದುರು ಅಸಹಾಯಕ ಸ್ಥಿತಿಯಲ್ಲಿ ಬಿದ್ದಿದ್ದ 55 ವರ್ಷ ಪ್ರಾಯದ, 5.5 ಅಡಿ ಎತ್ತರದ ಅಪರಿಚಿತ ವ್ಯಕ್ತಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಮೃತ ಶರೀರವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಮೃತರ ವಾರಸುದಾರರು ಯಾರಾದರೂ ಇದ್ದಲ್ಲಿ ಉಡುಪಿ ನಗರ ಪೊಲೀಸ್ ಠಾಣೆ (ದೂರವಾಣಿ:0820-2520444), ಪೊಲೀಸ್ ವೃತ್ತ ನಿರೀಕ್ಷಕರು (0820-2520329), ಉಡುಪಿ ಜಿಲ್ಲಾ ನಿಸ್ಸಂತು ಕಚೇರಿಯನ್ನು (0820-2526444) ಸಂಪರ್ಕಿಸುವಂತೆ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News