ಮುಕ್ಕೂರು ಅಂಚೆ ಕಚೇರಿ ಸ್ಥಳಾಂತರಕ್ಕೆ ವಿರೋಧ: ಗ್ರಾಹಕರಿಂದ ಪ್ರತಿಭಟನೆ
ಪುತ್ತೂರು: ಪೆರುವಾಜೆ ಗ್ರಾಮದ ಮುಕ್ಕೂರು ಅಂಚೆ ಕಚೇರಿಯನ್ನು ಗ್ರಾಹಕರಿಗೆ ಮಾಹಿತಿ ನೀಡದೆ ಏಕಾಏಕಿಯಾಗಿ ಸ್ಥಳಾಂತರಿಸಿದ್ದು, ಇದನ್ನು ಪುನಃ ಮುಕ್ಕೂರಿನಲ್ಲಿ ಮುಂದುವರಿಸುವಂತೆ `ಮುಕ್ಕೂರು ಅಂಚೆ ಕಚೇರಿ ಉಳಿಸಿ ಹೋರಾಟ ಸಮಿತಿ' ಯ ವತಿಯಿಂದ ಪುತ್ತೂರು ಪ್ರಧಾನ ಅಂಚೆ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿಸಲಾಯಿತು.
ಈ ಸಂದರ್ಭ ಮಾತನಾಡಿದ ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಅವರು 55 ವರ್ಷಕ್ಕೂ ಅಧಿಕ ಕಾಲ ಮುಕ್ಕೂರಿನಲ್ಲಿದ್ದ ಅಂಚೆ ಕಚೇರಿಯನ್ನು ಗ್ರಾಹಕರಿಗೆ ಮಾಹಿತಿ ಕೊಡದೆ ಪೆರುವಾಜೆ ಗ್ರಾ.ಪಂ.ಕಟ್ಟಡಕ್ಕೆ ಸ್ಥಳಾಂತರಿಸಿದ್ದಾರೆ. ಈ ಭಾಗದ ಜನರ ಹೆಚ್ಚಿನ ಖಾತೆಗಳು ಇಲ್ಲಿದೆ. ಸ್ಥಳಾಂತರವು ಗ್ರಾಹಕರಿಗೆ ಮಾಡಿರುವ ವಂಚನೆಯಾಗಿದ್ದು, ಅಂಚೆ ಕಛೇರಿ ಸ್ಥಳಾಂತರಕ್ಕೆ ನಮ್ಮ ವಿರೋಧವಿದ್ದು, ಅಂಚೆ ಕಚೇರಿ ಮುಕ್ಕೂರಿನಲ್ಲಿ ಪುನರಾರಂಭ ಮಾಡುವವರೆಗೂ ಹೋರಾಟ ನಿರಂತರವಾಗಿ ನಡೆಸಲಾಗುವುದು ಎಂದರು.
ಪ್ರತಿಭಟನೆಯ ಬಳಿಕ ಅಂಚೆ ಅಧೀಕ್ಷಕರಿಗೆ ಮನವಿ ಸಲ್ಲಿಸಿ ಅಂಚೆ ಕಚೇರಿ ಸ್ಥಳಾಂತರದಿಂದಾಗುವ ಸಮಸ್ಯೆಯ ಕುರಿತು ವಿವರಿಸಲಾಯಿತು.
ಅಂಚೆ ಕಚೇರಿ ಉಳಿಸಿ ಹೋರಾಟ ಸಮಿತಿ ಗೌರವಾಧ್ಯಕ್ಷ ಗೋಪಾಲಕೃಷ್ಣ ಭಟ್ ,ಅಧ್ಯಕ್ಷ ಉಮೇಶ್ ಕೆ.ಎಂ.ಬಿ,ಕಾರ್ಯದರ್ಶಿ ಸತ್ಯಪ್ರಸಾದ್ ಕಂಡಿಪ್ಪಾಡಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಸುಧಾಕರ ರೈ ಕುಂಜಾಡಿ, ದಾಮೋದರ ಗೌಡ ಕಂಡಿಪ್ಪಾಡಿ, ಗುಡ್ಡಪ್ಪ ಗೌಡ ಅಡ್ಯತಕಂಡ,ಕುಶಾಲಪ್ಪ ಗೌಡ ಅಡ್ಯತಕಂಡ ,ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಪಳ್ಳಿಕುಂಞ ಪಝಲ್ ರಹಿಮಾನ್, ಕೆ.ನಾಗರಾಜ್, ರೂಪಾನಂದ , ದಿವಾಕರ ಕೆ,ಕುಂಞಣ್ಣ ನಾಯ್ಕ ಅಡ್ಯತಕಂಡ, ಕೇಶವ, ನಾರಾಯಣ ಕೊಂಡೆಪ್ಪಾಡಿ, ಇಸ್ಮಾಯಿಲ್ ಕಾನಾವು, ರಮೇಶ್ ಕುವೆತಡ್ಕ, ನಾರಾಯಣ ಗೌಡ ಅಡ್ಯತಕಂಡ, ದಯಾನಂದ ರೈ ಕನ್ನೆಜಾಲು,ಕುಶಾಲಪ್ಪ ಗೌಡ, ನಾರಾಯಣ ರೈ ಪೂವಾಜೆ,ಇಬ್ರಾಹಿಂ ಮುಕ್ಕೂರು, ಜಯಂತ ಕುಂಡಡ್ಕ, ಗಣೇಶ್ ಶೆಟ್ಟಿ ಕುಂಜಾಡಿ, ತಿರುಮಲೇಶ್ವರ ಭಟ್ ಕಾನಾವು, ಸುಬ್ರಾಯ ಭಟ್ ನೀರ್ಕಜೆ, ವಾದಿರಾಜ್ ಆಚಾರ್ಯ, ನಾರಾಯಣ ಕುಂಡಡ್ಕ, ಸಂಜೀವ ಗೌಡ ಬೈಲಂಗಡಿ ಮತ್ತಿತರರು ಉಪಸ್ಥಿತರಿದ್ದರು.