×
Ad

ಬಂಟ್ವಾಳ: ಹುಚ್ಚು ನಾಯಿ ದಾಳಿ; ಮೂರು ಮಂದಿಗೆ ಗಾಯ

Update: 2019-06-07 22:51 IST

ಬಂಟ್ವಾಳ, ಜೂ. 7: ಹುಚ್ಚು ನಾಯಿಗಳು ಪಾದಚಾರಿಗಳ ಮೇಲೆ ದಾಳಿ ಮಾಡಿದ ಪರಿಣಾಮ ಮೂರು ಮಂದಿ ಗಾಯಗೊಂಡ ಘಟನೆ ಪುಣಚ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. 

ಪುಣಚ ಗ್ರಾಮದ ಅಜ್ಜಿನಡ್ಕದಲ್ಲಿ ಶುಕ್ರವಾರ ಬೆಳಿಗ್ಗೆ ನಾಯಿಗಳು ಓಡಾಟ ನಡೆಸುತ್ತಿತ್ತು. ಈ ವೇಳೆ ಸ್ಥಳೀಯ ಯುವಕರು ಅದನ್ನು ಒಡಿಸುವ ಕಾರ್ಯಚರಣೆಗೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಯುವಕನೊರ್ವನ ಕೈಗೆ ಹುಚ್ಚು ನಾಯಿ ಕಚ್ಚಿ ಗಾಯಗೊಳಿಸಿದೆ. ಮತ್ತೊಬ್ಬ ಯುವಕ ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾನೆ. ಅದೇ ರೀತಿ ಕೇಪು ಗ್ರಾಮದ ನೀಕರ್ಜೆ ಚಿಮಿನಡ್ಕ ಪ್ರದೇಶದಲ್ಲಿ ಯುವಕನ ಮೇಲೆ ನಾಯಿ ದಾಳಿ ಮಾಡಿದೆ. ಘಟನೆಯ ಬಳಿಕ ಎರಡು ನಾಯಿಗಳು ಸತ್ತು ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ಬಗ್ಗೆ ಸ್ಥಳೀಯರು ಈಗಾಗಲೇ ಪುಣಚ ಗ್ರಾಮ ಪಂಚಾಯತ್‍ಗೆ, ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಣಾಧಿಕಾರಿ, ವಿಟ್ಲ ಪೆÇಲೀಸ್ ಠಾಣೆ ಮತ್ತು ವಿಟ್ಲ ಪಶು ವೈದ್ಯಕೀಯ ಇಲಾಖೆ ಮೊದಲಾದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದು, ತಕ್ಷಣವೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News