×
Ad

ಫರಂಗಿಪೇಟೆ ಗ್ರಾಪಂ ಸದಸ್ಯನ ಕೊಲೆ ಯತ್ನ ಪ್ರಕರಣ: ವಿಶೇಷ ತಂಡ ರಚನೆ- ಸಚಿವ ಖಾದರ್

Update: 2019-06-07 22:56 IST

ಮಂಗಳೂರು: ಶುಕ್ರವಾರ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೀನು ವ್ಯಾಪಾರಿ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಮುಹಮ್ಮದ್ ಅವರನ್ನು ಶುಕ್ರವಾರ ರಾತ್ರಿ ಸಚಿವ ಯುಟಿ ಖಾದರ್ ಭೇಟಿ ಆರೋಗ್ಯ ವಿಚಾರಿಸಿದರು.‌

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಘಟನೆ ಖಂಡನೀಯ. ಆರೋಪಿಗಳ ಬಂಧನಕ್ಕೆ‌ ಪೊಲೀಸ್ ಇಲಾಖೆ ವಿಶೇಷ ತಂಡ ರಚಿಸಿದೆ. ಶೀಘ್ರ ಪೊಲೀಸ್ ಇಲಾಖೆ ಆರೋಪಿಗಳನ್ನು ಬಂಧಿಸಿ‌ ಕೃತ್ಯದ ಹಿಂದಿನ ಕಾರಣ ಬಹಿರಂಗಪಡಿಸಲಿದೆ ಎಂದಿದ್ದಾರೆ.

ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು‌ ಸಚಿವ ಖಾದರ್ ಈ ಸಂದರ್ಭ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News