×
Ad

ಕೈಕಂಬ: ಸ್ನೇಹಿತರ ನಡುವೆ ಹೊಡೆದಾಟ; ಮೂರು ಮಂದಿಗೆ ಗಾಯ

Update: 2019-06-07 22:59 IST

ಬಂಟ್ವಾಳ : ಸ್ನೇಹಿತರ ನಡುವೆ ಹೊಡೆದಾಟ ನಡೆದು ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಿ.ಸಿ.ರೋಡ್ ಕೈಕಂಬದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಇಲ್ಲಿನ‌ ಕೈಕಂಬ ನಿವಾಸಿಗಳಾದ ಫೈಝಲ್, ರಿಯಾಝ್, ಹಬೀಬ್ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿ.ಸಿ.ರೋಡ್ ಕೈಕಂಬ ಜಂಕ್ಷನ್ ನಲ್ಲಿ ಸ್ನೇಹಿತರ ನಡುವೆ ಕತ್ತಿ ಕಾಳಗ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯ ಸಂದರ್ಭದಲ್ಲಿ ಕೈಕಂಬ ಜಂಕ್ಷನ್ ನಲ್ಲಿ ಭಾರೀ ಸಂಖ್ಯೆಯ ಸ್ಥಳೀಯರು ಹಾಗೂ ಕುತೂಹಲಿಗರು ನೆರೆದಿದ್ದು, ಪೊಲೀಸರು ಲಘು ಲಾಠಿ ಬೀಸಿ ಜನರನ್ನು ಚದುರಿಸಿದ್ದಾರೆ. 

ಮುಂಜಾಗ್ರತಾ ಕ್ರಮವಾಗಿ ಕೈಂಕಬದಲ್ಲಿ ಪೊಲೀಸರನ್ನು ನೇಮಿಸಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಎಸ್ಸೈ ಚಂದ್ರ ಶೇಖರ್ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ. 

ಘಟನೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News