ಭಾರತೀಯ ರೈಲುಗಳಲ್ಲಿ ಇನ್ನು 100ರೂ.ಗೆ ಮಸಾಜ್ ಸೇವೆ ಲಭ್ಯ

Update: 2019-06-08 14:14 GMT

ಹೊಸದಿಲ್ಲಿ,ಜೂ.8: ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚಲಿಸುತ್ತಿರುವ ರೈಲುಗಳಲ್ಲಿ ಪ್ರಯಾಣಿಕರಿಗೆ ಮಸಾಜ್ ಸೇವೆ ಲಭ್ಯವಾಗಲಿದೆ. ಮಧ್ಯಪ್ರದೇಶದ ಇಂದೋರ್ ನಿಂದ ಹೊರಡುವ 39 ರೈಲುಗಳಲ್ಲಿ ಈ ಸೇವೆ ದೊರೆಯಲಿದೆ.

ಇದಕ್ಕಾಗಿ ಪಶ್ಚಿಮ ರೈಲ್ವೆ ವಲಯದ ರತ್ಲಾಮ್ ವಿಭಾಗವು ಪ್ರಸ್ತಾವನೆಯನ್ನು ಸಲ್ಲಿಸಿತ್ತು.

 ಮಸಾಜ್ ಸೇವೆಯಿಂದ ರೈಲ್ವೆಯ ಆದಾಯವು ಹೆಚ್ಚುವ ಜೊತೆಗೆ ಪ್ರಯಾಣಿಕರಿಗೂ ಹಿತಾನುಭವ ದೊರೆಯಲಿದೆ. ಇದೇ ಮೊದಲ ಬಾರಿಗೆ ಇಂತಹ ಒಪ್ಪಂದಕ್ಕೆ ರೈಲ್ವೆಯು ಸಹಿ ಹಾಕಿದೆ ಎಂದು ರೈಲ್ವೆ ಮಂಡಳಿಯ ನಿರ್ದೇಶಕ(ಮಾಧ್ಯಮ ಮತ್ತು ಸಂವಹನ) ರಾಜೇಶ ಬಾಜಪೈ ತಿಳಿಸಿದರು.

ತಲೆ ಮತ್ತು ಕಾಲುಗಳ ಮಸಾಜ್‌ಗೆ ತಲಾ 100 ರೂ.ಗಳ ಶುಲ್ಕದಲ್ಲಿ ಈ ಸೇವೆ ಲಭ್ಯವಿರುತ್ತದೆ.

ಇದು ಇಲಾಖೆಯ ಪ್ರಯಾಣ ಶುಲ್ಕೇತರ ಆದಾಯವನ್ನು ಹೆಚ್ಚಿಸಲು ಹೊಸ ಮತ್ತು ವಿನೂತನ ಪರಿಕಲ್ಪನೆಗಳನ್ನು ಸಲ್ಲಿಸುವಂತೆ ವಲಯಗಳು ಮತ್ತು ವಿಭಾಗಗಳಿಗೆ ಸೂಚಿಸಿದ್ದ ರೈಲ್ವೆ ಯೋಜನೆಯ ಭಾಗವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News