ವಾಯುಯಾನ ಭದ್ರತಾ ಶುಲ್ಕ ಹೆಚ್ಚಳ: ಜು.1ರಿಂದ ವಿಮಾನಯಾನ ದುಬಾರಿ

Update: 2019-06-08 14:18 GMT

ಹೊಸದಿಲ್ಲಿ,ಜೂ.8: ವಾಯುಯಾನ ಭದ್ರತಾ ಶುಲ್ಕವನ್ನು ಜು.1ರಿಂದ ಪ್ರತಿ ಪ್ರಯಾಣಿಕನಿಗೆ ಈಗಿನ 130 ರೂ.ನಿಂದ 150 ರೂ.ಗೆ ಹೆಚ್ಚಿಸಲು ನಾಗರಿಕ ವಾಯುಯಾನ ಸಚಿವಾಲಯವು ನಿರ್ಧರಿಸಿದ್ದು,ವಿಮಾನಯಾನಗಳು ಸ್ವಲ್ಪ ದುಬಾರಿಯಾಗಲಿವೆ.

ಅಂತರರಾಷ್ಟ್ರೀಯ ಪ್ರಯಾಣಿಕರಿಗಾಗಿ ಈ ಶುಲ್ಕವನ್ನು 3.25 ಡಾ.ನಿಂದ 4.85 ಡಾ.ಗೆ ಹೆಚ್ಚಿಸಲಾಗಿದೆ. ದೇಶೀಯ ಪ್ರಯಾಣಿಕರಿಗೆ 150 ರೂ. ಮತ್ತು ಅಂತರರಾಷ್ಟ್ರೀಯ ಪ್ರಯಾಣಿಕರಿಗೆ 4.85 ಡಾ.ಅಥವಾ ಸಮಾನ ಭಾರತೀಯ ರೂ.ಗಳನ್ನು ವಾಯುಯಾನ ಭದ್ರತಾ ಶುಲ್ಕವಾಗಿ ವಿಧಿಸಲಾಗುವುದು ಎಂದು ನಾಗರಿಕ ವಾಯುಯಾನ ಸಚಿವಾಲಯವು ತಿಳಿಸಿದೆ.

ನೂತನ ಶುಲ್ಕಗಳು ಜು.1ರಂದು 00:01 ಗಂಟೆಯಿಂದ ಅನ್ವಯಗೊಳ್ಳಲಿವೆ ಎಂದೂ ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News