ಅಲೆವೂರು: ಕೃಷಿ ರಥದಿಂದ ಸಮಗ್ರ ಮಾಹಿತಿ
Update: 2019-06-08 19:59 IST
ಉಡುಪಿ, ಜೂ.8: ಸಮಗ್ರ ಕೃಷಿ ಅಭಿಯಾನದಡಿ ಹಮ್ಮಿಕೊಳ್ಳಲಾದ ಕೃಷಿ ರಥವು ಅಲೆವೂರು ಗ್ರಾಪಂಗೆ ಆಗಮಿಸಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಕೃಷಿ ಮತ್ತು ತೋಟಗಾರಿಕೆ ಕುರಿತ ಮಾಹಿತಿಗಳನ್ನು ನೀಡಲಾಯಿತು.
ತೋಟಗಾರಿಕಾ ನಿರ್ದೇಶಕ ಮೋಹನ್ ರಾಜ್ ಹಾಗೂ ಕೃಷಿ ವಿಜ್ಞಾನಿ ಬಸಮ್ಮ ಹದಿಮನಿ ರೈತರಿಗೆ ಸಿಗುವ ಕಿಸಾನ್ ಸಮ್ಮಾನ್, ಕ್ರಷಿ ಯಂತ್ರಗಳ ಸಬ್ಸಿಡಿ, ಬಿತ್ತನೆ ಬೀಜ, ವೈಜ್ಞಾನಿಕ ಕೃಷಿ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು. ತೋಟಗಾರಿಕಾ ಇಲಾಖಾ ಮಾಹಿತಿಯನ್ನು ಇಲಾಖಾಧಿಕಾರಿ ದೀಪಾ ನೀಡಿದರು.
ಅಧ್ಯಕ್ಷತೆಯನ್ನು ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಕಾಂತ ನಾಯಕ್ ವಹಿಸಿದ್ದರು. ಉಪಾಧ್ಯಕ್ಷೆ ಜಯಲಕ್ಷ್ಮಿ ಹಂಸರಾಜ್, ಸದಸ್ಯರುಗಳಾದ ಪುಷ್ಪಲತಾ ಮಾರ್ಪಳ್ಳಿ, ಶಾಂತ ನಾಯ್ಕ್, ಪ್ರಗತಿಪರ ಕೃಷಿಕ ಗೋಪಾಲ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಯಾನಂದ ಬೆಣ್ಣೂರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕಲಾ ಜಾಥ ಕಾರ್ಯಕ್ರಮ ನಡೆಯಿತು.