×
Ad

ಜೂ.10ರಂದು ಸರ್ವಧರ್ಮ ಈದ್ ಆಚರಣೆ

Update: 2019-06-08 20:00 IST

ಉಡುಪಿ, ಜೂ.8: ಸೌಹಾರ್ದ ಸಮಿತಿ, ಕೆಥೋಲಿಕ್ ಸಭಾ ಉಡುಪಿ ಘಟಕ, ಉಡುಪಿ ಶೋಕಮಾತಾ ಇಗರ್ಜಿ ಹಾಗೂ ಲಯನ್ಸ್ ಕ್ಲಬ್ ಉಡುಪಿ ಸಂಗಮದ ವತಿಯಿಂದ ಸರ್ವಧರ್ಮ ಈದ್ ಆಚರಣೆ ಜೂ.10ರಂದು ಸಂಜೆ 5:30ಕ್ಕೆ ಶೋಕಮಾತಾ ಇಗರ್ಜಿ ಸಭಾಂಗಣದಲ್ಲಿ ಜರಗಲಿದೆ.

ಮುಖ್ಯ ಅತಿಥಿಗಳಾಗಿ ಹೂಡೆ ಮಹಮ್ಮದೀಯ ಎಜ್ಯುಕೇಶನಲ್ ಟ್ರಸ್ಟ್‌ನ ಉಪಾಧ್ಯಕ್ಷ ಇದ್ರೀಸ್ ಹೂಡೆ, ಉಡುಪಿ ಧರ್ಮಪ್ರಾಂತ್ಯದ ಸಂಪರ್ಕ ಸಾಧನ ಕೇಂದ್ರದ ನಿರ್ದೇಶಕ ವಂ.ಫಾ.ಚೇತನ್ ಲೋಬೊ, ಇಂದ್ರಾಳಿ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಜಯಕರ ಶೆಟ್ಟಿ ಇಂದ್ರಾಳಿ ಭಾಗವಹಿಸಲಿರುವರು.

ಅಧ್ಯಕ್ಷತೆಯನ್ನು ಚರ್ಚಿನ ಪ್ರಧಾನ ಧರ್ಮಗುರು ಅತಿ ವಂ. ವಲೇರಿಯನ್ ಮೆಂಡೊನ್ಸಾ ವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News