ಜೂ.11: ‘ಸ್ವಚ್ಛ ಮೇವಾ ಜಯತೇ’ ಆಂದೋಲನಕ್ಕೆ ಚಾಲನೆ
Update: 2019-06-08 20:10 IST
ಮಂಗಳೂರು, ಜೂ.8: ದ.ಕ.ಜಿಪಂ, ಮಂಗಳೂರು ತಾಪಂ, ಪಾವೂರು ಗ್ರಾಪಂ ವತಿಯಿಂದ ಸ್ವಚ್ಛ ಭಾರತ್ ಮಿಷನ್ (ರಿ)ಯೋಜನೆಯ ಜಿಲ್ಲಾ ಮಟ್ಟದ ‘ಸ್ವಚ್ಛ ಮೇವಾ ಜಯತೇ’ ಆಂದೋಲನಕ್ಕೆ ಜೂ.11ರಂದು ಬೆಳಗ್ಗೆ 10ಕ್ಕೆ ಪಾವೂರು ಗ್ರಾಪಂನಲ್ಲಿ ಚಾಲನೆ ನೀಡಲಾಗುವುದು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಆಂದೋಲನಕ್ಕೆ ಚಾಲನೆ ನೀಡಲಿದ್ದು, ಜಿಲ್ಲೆಯ ವಿವಿಧ ಸ್ತರದ ಜನಪ್ರನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.