ಬಟ್ರಕೆರೆ : ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ
Update: 2019-06-08 20:19 IST
ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸುಂಕದಕಟ್ಟೆ ವಲಯದ ಬಟ್ರಕೆರೆ ಯೂನಿಟ್ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವು ಉರ್ದು ಸ್ಕೂಲ್ ಭಟ್ರಕೆರೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿಎಪ್ಐ ಸುಂಕದಕಟ್ಟೆ ವಲಯಾಧ್ಯಕ್ಷ ಬಶೀರ್ ವಹಿಸಿದರು. ಮುಖ್ಯ ಅತಿಥಿಗಳಾಗಿ ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಅಶ್ರಪ್ ಮಾಚಾರ್, ಜಾಮಿಯಾ ಮಸೀದಿ ಅಧ್ಯಕ್ಷ ಪಯಾಝ್, ಊರ ಹಿರಿಯ ವ್ಯಕ್ತಿಗಳಾದ ಶಬೀರ್ ಭಾಯ್, ಮುಹಮ್ಮದ್ ಆಲಿ ಹಾಗೂ ಮುಖ್ತಾರ್ ಉಪಸ್ಥಿತರಿದ್ದರು.
ರಹ್ಮತುಲ್ಲಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ 58 ವಿದ್ಯಾರ್ಥಿಗಳಿಗೆ ಶಾಲಾ ಪುಸ್ತಕವನ್ನು ವಿತರಿಸಲಾಯಿತು.