ಪಿಕ್‌ಅಪ್ ಢಿಕ್ಕಿ: ಹೆದ್ದಾರಿ ಗೇಟ್ ಜಖಂ

Update: 2019-06-08 16:07 GMT

ಕೋಟ, ಜೂ.8: ಮಣೂರು ಗ್ರಾಮದ ಬಬ್ಬುಸ್ವಾಮಿ ದೇವಸ್ಥಾನದ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜು.8ರಂದು ಬೆಳಗಿನ ಜಾವ ಬೊಲೆರೋ ಪಿಕ್‌ಅಪ್ ವಾಹನ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಿರ್ಮಿಸಲಾದ ಕಬ್ಬಿಣದ ಗೇಟುಗಳು ಜಖಂಗೊಂಡ ಬಗ್ಗೆ ವರದಿಯಾಗಿದೆ.

ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಬೊಲೆರೋ ಪಿಕ್ ಅಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯಲ್ಲಿ ನಿರ್ಮಿಸಿದ ಕಬ್ಬಿಣದ ಗೇಟಿಗೆ ಡಿಕ್ಕಿ ಹೊಡೆದ ಪರಿಣಾಮ 11 ಕಬ್ಬಿಣದ ಗೇಟ್ ಜಖಂ ಗೊಂಡಿವೆ. ಇದರಿಂದ 35000 ರೂ. ನಷ್ಟ ಉಂಟಾಗಿದೆ ಎಂದು ದೂರಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News