×
Ad

ಆಂಧ್ರಪ್ರದೇಶ: ಗೃಹ ಸಚಿವ ಸ್ಥಾನಕ್ಕೆ ದಲಿತ ಮಹಿಳೆಯನ್ನು ನೇಮಿಸಿದ ಜಗನ್

Update: 2019-06-08 21:38 IST
ಚಿತ್ರ ಕೃಪೆ: thehindu

ಅಮರಾವತಿ: ಐವರು ಉಪಮುಖ್ಯಮಂತ್ರಿಗಳನ್ನು ನೇಮಕಗೊಳಿಸಿದ ಆಂಧ್ರಮುಖ್ಯಮಂತ್ರಿ ವೈ.ಎಸ್.ಜಗನ್‌ಮೋಹನ್ ರೆಡ್ಡಿ ಅವರು, ಶನಿವಾರ ರಾಜ್ಯದ ಗೃಹ ಸಚಿವ ಸ್ಥಾನಕ್ಕೆ ದಲಿತ ಮಹಿಳೆಯೊಬ್ಬರನ್ನು ನೇಮಿಸುವ ಮೂಲಕ ಇನ್ನೊಂದು ಅಚ್ಚರಿ ನೀಡಿದ್ದಾರೆ.

 ಗುಂಟೂರು ಜಿಲ್ಲೆಯ ಪ್ರತಿಪಾಡು ಎಸ್‌ಸಿ ಮೀಸಲು ಕ್ಷೇತ್ರದ ಶಾಸಕಿ ಮೆಕದೋಟಿ ಸುಚರಿತ ಅವರು ರಾಜ್ಯದ ಗೃಹ ಸಚಿವೆಯಾಗಿ ಇತರ 27 ಸಚಿವರ ಜೊತೆ ಶನಿವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಜಗನ್‌ಮೋಹನ್‌ರೆಡ್ಡಿ ಅವರ ತಂದೆ ವೈ.ಎಸ್.ರಾಜಶೇಖರ ರೆಡ್ಡಿ ಅವರು ಕಾಂಗ್ರೆಸ್ ಸರಕಾರದಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಗೃಹ ಸಚಿವ ಸ್ಥಾನಕ್ಕೆ ಮಹಿಳೆಯೊಬ್ಬರನ್ನು ನೇಮಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ರಾಜಶೇಖರ ರೆಡ್ಡಿ ಸಂಪುಟದಲ್ಲಿ ಗೃಹ ಸಚಿವೆಯಾಗಿದ್ದ ಪಿ. ಸಬಿತಾ ಇಂದ್ರ ರೆಡ್ಡಿ ಈಗ ತೆಲಂಗಾಣ ರಾಷ್ಟ್ರ ಸಮಿತಿಯ ಶಾಸಕಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News