ಅಲ್ ಖಾದಿಸ ಎಜುಕೇಶನ್ ಅಕಾಡಮಿ ಮದೀನಾ ಮುನವ್ವರ ಘಟಕ ವಾರ್ಷಿಕ ಸಭೆ : ನೂತನ ಸಮಿತಿ ಆಯ್ಕೆ
ಮದೀನಾ ಮುನವ್ವರ : ಅಲ್ ಖಾದಿಸ ಎಜುಕೇಶನ್ ಅಕಾಡೆಮಿ ಮದೀನಾ ಮುನವ್ವರ ಘಟಕ ಇದರ ವಾರ್ಷಿಕ ಸಭೆಯು ಮದೀನಾ ಮುನವ್ವರದ ಕೆಸಿಎಫ್ ಭವನದಲ್ಲಿ ನಡೆಯಿತು.
ಅಲ್ ಖಾದಿಸ ಎಜುಕೇಶನ್ ಅಕಾಡೆಮಿ ಕಾವಳಕಟ್ಟೆ ಇದರ ಸಂಸ್ಥಾಪಕರಾದ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಹಝ್ರತ್ ಕಾವಳಕಟ್ಟೆ ಅವರು ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು. ಇದೇ ವೇಳೆ ಹಝ್ರತ್ ಅವರ ಸಮ್ಮುಖದಲ್ಲಿ ನೂತನ ಕಮಿಟಿಯನ್ನು ನೇಮಕಗೊಳಿಸಲಾಯಿತು.
ಅಧ್ಯಕ್ಷರಾಗಿ ಸುಲೈಮಾನ್ ತುರ್ಕಳಿಕೆ, ಉಪಾಧ್ಯಕ್ಷರಾಗಿ ರಫೀಕ್ ಕಾಪು ಹಾಗೂ ತಾಜುದ್ದೀನ್ ಸುಳ್ಯ, ಕಾರ್ಯದರ್ಶಿಯಾಗಿ ಜಬ್ಬಾರ್ ಉಪ್ಪಿನಂಗಡಿ, ಗೌರವಾಧ್ಯಕ್ಷರಾಗಿ ಇಸ್ಮಾಯಿಲ್ ಉಳ್ಳಾಲ, ಉಪ ಕಾರ್ಯದರ್ಶಿಯಾಗಿ ಹಕೀಂ ಬೋಳಾರ್ ಹಾಗೂ ಝಾಕೀರ್ ಉಳ್ಳಾಲ, ಕೋಶಾಧಿಕಾರಿಯಾಗಿ ರಝಾಕ್ ಉಳ್ಳಾಲ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೇಮಕಗೊಳಿಸಲಾಯಿತು.
ಈ ವೇಳೆ ಅಶ್ರಫ್ ಸಖಾಫಿ ನೂಜಿ, ಆಸಿಫ್ ಬದ್ಯಾರ್, ಶಬೀರ್, ಸಿದ್ದೀಕ್ ಪಾದೆಕಲ್, ಹುಸೈನಾರ್ ಉರುವಾಲ್ ಪದವು ,ಉಮರ್ ಗೇರುಕಟ್ಟೆ, ಅಶ್ರಫ್ ಮಠ, ಖಾಸಿಂ ಉಸ್ತಾದ್ ಮತ್ತಿತರರು ಉಪಸ್ಥಿತರಿದ್ದರು.
ಅಲ್ ಖಾದಿಸ ಎಜುಕೇಶನ್ ಅಕಾಡೆಮಿ ಸೌದಿ ಅರೇಬಿಯಾ ಆರ್ಗನೈಸರ್ ಯೂಸುಫ್ ಮದನಿ ಸ್ವಾಗತಿಸಿ, ನಂತರ ವಂದಿಸಿದರು.