ಯಕ್ಷಗಾನ ಶಾಸ್ತ್ರೀಯ ಕಲೆಯ ಎತ್ತರಕ್ಕೇರಿದೆ -ಡಾ.ಮೋಹನ್ ಆಳ್ವ

Update: 2019-06-08 16:41 GMT

ಮಂಗಳೂರು : ಯಕ್ಷಗಾನ ಶಾಸ್ತ್ರೀಯ ಕಲೆಗೆ ಸಮಾನವಾದ ಎತ್ತರವನ್ನು ಏರಿದೆ ಎಂದು ಮೋಹನ್ ಆಳ್ವ ತಿಳಿಸಿದ್ದಾರೆ.

ಸನಾತನ ಯಕ್ಷಾಲಯ(ರಿ)ಇದರ ದಶ ಸಂವತ್ಸರ ಉತ್ಸವ ಸಮಾರಂಭವನ್ನು ಅವರು ಇಂದು ನಗರದ ಪುರಭವನದಲ್ಲಿ ಉದ್ಘಾಟಿಸಿ ಮಾತನಾ ಡುತ್ತಿದ್ದರು.

ಯಕ್ಷಗಾನ ಕಲೆ ಸಮಾನ ಮನಸ್ಕ ರ ಸಹಕಾರ ವಿವಿಧ ಸಂಘ ಸಂಸ್ಥೆ, ಧಾರ್ಮಿಕ ಸಂಸ್ಥೆ ಗಳ ಸಹಕಾರದೊಂದಿಗೆ ಬೆಳೆದಿದೆ. ಶಾಸ್ತ್ರೀಯ ಕಲೆಯ ಗೌರವವನ್ನು ಪಡೆಯುವ ಎಲ್ಲಾ ಅರ್ಹತೆ  ಯಕ್ಷಗಾನ ಕಲೆಗಿದೆ. ದೇಶ ವಿದೇಶಗಳಲ್ಲಿ ಯೂ ಖ್ಯಾತಿ ಪಡೆದಿದೆ. ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಮೋಹನ್ ಆಳ್ವ ಶುಭಹಾರೈಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿದ್ವಾಂಸ ಡಾ.ಪ್ರಭಾಕರ ಜೋಶಿ ಶುಭಹಾರೈಸಿದರು. ಸಮಾರಂಭದಲ್ಲಿ ಧಾರ್ಮಿಕ ಪರಿಷತ್ ಸದಸ್ಯ, ಪದ್ಮನಾಭ ಕೋಟ್ಯಾನ್, ಸಂತೋಷ್ ಕುಮಾರ್ ಶೆಟ್ಟಿ, ಓಂ ಪ್ರಕಾಶ್ ಶೆಟ್ಟಿ, ಆನಂದ ಬಂಗೇರಾ, ಶ್ರೀಪಾದ ಹೆಬ್ಬಾರ್ , ದಿನೇಶ್ ಶೆಟ್ಟಿ, ಗಿರೀಶ್ ಶೆಟ್ಟಿ, ಅಡ್ಕ ರಾಕೇಶ್ ರೈ, ಸದಾಶಿವ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ರವೀಂದ್ರ ಮಾಸ್ಟರ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News