ಕೈಕಂಬದಲ್ಲಿ ಇತ್ತಂಡಗಳ ನಡುವೆ ಹೊಡೆದಾಟ: ದೂರು, ಪ್ರತಿದೂರು
ಬಂಟ್ವಾಳ, ಜೂ. 8: ಕೈಕಂಬದಲ್ಲಿ ಶುಕ್ರವಾರ ರಾತ್ರಿ ಇತ್ತಂಡಗಳ ನಡುವೆ ಹೊಡೆದಾಟ ಘಟನೆಗೆ ಸಂಬಂಧಿಸಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ವಾಹನ, ಆಯುಧ ಸಹಿತ ಓರ್ವ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನಿಡಿದ್ದಾರೆ.
ದೂರು
ಜೂ. 7ರಂದು ಬಂಟ್ವಾಳ ಕೈಕಂಬದಲ್ಲಿ ಹಬೀಬ್ ರೆಹಮಾನ್ ಹಾಗೂ ನಿಶಾನ್ ಎಂಬವರು ಕಬ್ಬಿಣದ ಸರಳಿನಿಂದ ತನ್ನ ತಲೆಯ ಬಲಭಾಗಕ್ಕೆ ಹೊಡೆದಿರುತ್ತಾರೆ ಎಂದು ಹಲ್ಲೆಗೊಳಗಾದ ಬಂಟ್ವಾಳ ನಿವಾಸಿ ಅಬ್ದುಲ್ ಫೈಝಲ್ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಹಬೀಬ್ ರೆಹಮಾನ್, ನಜ್ಜಿ ಹಾಗೂ ನಿಶಾನ್ ಎಂಬವರ ವಿರುದ್ಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿದೂರು
ಜೂ. 8ರಂದು ರಾತ್ರಿ 9.30ಗಂಟೆಗೆ ಕೈಕಂಬದಲ್ಲಿ ತನ್ನ ಸಂಬಂಧಿ ಶಾಹಿನ್ ಮತ್ತು ಸ್ನೇಹಿತ ಸಲ್ಸಾರ್ ಎಂಬವರರೊದಿಗೆ ನಿಂತಿದ್ದಾಗ, ಕಾರಿನಲ್ಲಿ ಪೈಝಲ್ ಎಂಬಾತನು ಬಂದು ಅವ್ಯಾಚ ಶಬ್ದಗಳಿಂದ ನಿಂದಿಸಿ ತಲವಾರಿನಿಂದ ಹಲ್ಲೆ ನಡೆಸಿರುತ್ತಾನೆ ಎಂದು ಈ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ನಿವಾಸಿ ಹಬೀಬ್ ರೆಹಮಾನ್ ಎಂಬವರು ಪ್ರತಿದೂರನ್ನು ನೀಡಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಫೈಝಲ್, ಇರ್ಫಾನ್ (ತೊಂದೆ) ವಿರುದ್ಧ ಪ್ರಕರಣ ದಾಖಲಾಗಿದೆ.