×
Ad

ಇತ್ಯರ್ಥವಾಗದ ಭಾರತೀಯ ನೌಕರರ ಸಮಸ್ಯೆ: ಕುವೈತ್‌ನಲ್ಲಿ ಸಭೆ ಮತ್ತೆ ಮುಂದೂಡಿಕೆ

Update: 2019-06-09 22:04 IST

ಮಂಗಳೂರು, ಜೂ.9: ಕುವೈತ್‌ನ ಶೋನ್ (ನ್ಯಾಯಾಲಯ ಮಾದರಿ ಸರಕಾರಿ ಸ್ವಾಮ್ಯದ ಸಂಸ್ಥೆ) ನಲ್ಲಿ ರವಿವಾರ ನಡೆಯಬೇಕಾಗಿದ್ದ ಸಭೆ ಮತ್ತೆ ಮುಂದೂಡಲ್ಪಟ್ಟಿದೆ.

ರಮಝಾನ್ ಪ್ರಯುಕ್ತ ಐದು ದಿನಗಳ ಸರಕಾರಿ ರಜೆ ಮುಗಿದು ರವಿವಾರ ಕಚೇರಿಗೆ ಹಾಜರಾಗಿದ್ದ ಶೋನ್ ಅಧಿಕಾರಿಗಳು, ಸಂಕಷ್ಟದಲ್ಲಿರುವ ಭಾರತೀಯ ನೌಕರರ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಿಲ್ಲ. ಜೂ.10 ಅಥವಾ 11ರಂದು ಶೋನ್‌ನಲ್ಲಿ ಸಭೆ ನಡೆಯಬಹುದು. ಆ ಸಭೆಯಲ್ಲಿ ಪ್ರಕರಣದ ಸಂತ್ರಸ್ತರ ಸಮಸ್ಯೆ ಇತ್ಯರ್ಥವಾಗಬಹುದು ಎಂದು ರಾಯಭಾರಿ ಕಚೇರಿ ಮೂಲಗಳು ತಿಳಿಸಿವೆ.

ಕಳೆದ ಜೂ.2ರಂದು ನಡೆದ ಸಭೆಯಲ್ಲಿ 53 ಭಾರತೀಯ ನೌಕರರ ಪ್ರಕರಣಗಳು ಇತ್ಯರ್ಥಪಡಿಸಲು ಸಂಬಂಧಿಸಿ ಸಂಬಂಧಪಟ್ಟವರು, ನೌಕರರು, ಕಂಪೆನಿ ಮತ್ತು ಕುವೈತ್‌ನ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಸಹಿ ಹಾಕಿದ್ದರು.

ಎರಡನೇ ದಿನ ಸೋಮವಾರ (ಜೂ.3) ನಡೆಯಲಿದ್ದ ಸಭೆಯಲ್ಲಿ ಉಳಿದ ಕಾರ್ಮಿಕರ ಪ್ರಕರಣಗಳ ಇತ್ಯರ್ಥ, ಬಾಕಿ ಹಣ ಪಾವತಿ, ಪಾಸ್‌ಪೋರ್ಟ್ ಹಸ್ತಾಂತರ ನಡೆಯಬೇಕಿತ್ತು. ಆ ಸಭೆ ಜೂ.9ಕ್ಕೆ ಮುಂದೂಡಲ್ಪಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News