ಕಾರ್ನಾಡ್ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಸಂತಾಪ

Update: 2019-06-10 09:18 GMT

ಬೆಂಗಳೂರು, ಜೂ.10: ಜ್ಞಾನಪೀಠ ಪುರಸ್ಕೃತ ಸಾಹಿತಿ, ಚಿಂತಕ, ಗಿರೀಶ್ ಕಾರ್ನಾಡ್ ಅವರ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಬ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕಾರ್ನಾಡ್ ಕನ್ನಡ ನಾಡಿನ ಹಿರಿಮೆ. ಅವರ ನಿಧನವು ವೈಚಾರಿಕ ಲೋಕಕ್ಕೆ ಭಾರೀ ದೊಡ್ಡ ನಷ್ಟ ಉಂಟು ಮಾಡಿದೆ. ಅವರು ಎಲ್ಲ ಬಗೆಯ ಸಾಹಿತ್ಯ ಪ್ರಕಾರಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದು ಆ ಮೂಲಕ ಜನರಲ್ಲಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಸಫಲರಾಗಿದ್ದರು, ಈ ಸಂದರ್ಭದಲ್ಲಿ ಸಹಜವಾಗಿ ಫ್ಯಾಶಿಸಂನ್ನೂ ಎದೆಗುಂದದೆ ಸಮರ್ಥವಾಗಿ ಎದುರಿಸಿದ ಅವರ ಹೋರಾಟ ಮನೋಭಾವವು ನಾಡಿನ ಬುದ್ಧಿಜೀವಿಗಳಿಗೆ ಮಾದರಿಯಾಗಿದೆ. ದೂರದರ್ಶನದಲ್ಲಿ ವಿಜ್ಞಾನ ಕಾರ್ಯಕ್ರಮವನ್ನು ಸಂಯೋಜಿಸಿ, ನಿರೂಪಿಸುವ ಮೂಲಕ ಜನರಲ್ಲಿನ ಮೌಢ್ಯವನ್ನು ಹೋಗಲಾಡಿಸಿ, ಆ ಮೂಲಕ ಹಿಂದುಳಿದ ವರ್ಗದ ಜನರು ಶೋಷಣೆಗೆ ಒಳಗಾಗುವುದನ್ನು ತಡೆಹಿಡಿಯುವ ಪ್ರಯತ್ನ ಮಾಡಿದ್ದು ಶ್ಲಾಘನೀಯ.

ಗಿರೀಶ್ ಕಾರ್ನಾಡ್ ಈ ನಾಡಿನಲ್ಲಿ ಬಿತ್ತಿ ಹೋಗಿರುವ ಅಕ್ಷರಗಳು ವೈಚಾರಿಕತೆಯು ಹೆಮ್ಮರವಾಗಿ ಬೆಳೆಯಲು ಎಲ್ಲ ಪ್ರಗತಿಪರ ಚಿಂತಕರು ಪರಸ್ಪರ ಸಹಕಾರ ನೀಡಬೇಕು ಎಂದು ಅವರು ಹೇಳಿಕೆಯಲ್ಲಿ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News