×
Ad

ಕಾಲದ ಬೇಡಿಕೆಗೆ ಸಮಸ್ತ ಸ್ಪಂದಿಸುತ್ತಿದೆ: ಎಂಟಿ ಉಸ್ತಾದ್

Update: 2019-06-10 18:48 IST

ಮಂಗಳೂರು, ಜೂ.10: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಅಧೀನದಲ್ಲಿ ಪ್ರಾರಂಭಗೊಂಡಿರುವ ಅಲ್‌ಬಿರ್ರ್‌ ಪ್ರೀ ಇಸ್ಲಾಮಿಕ್ ಸ್ಕೂಲ್‌ನ ರಾಜ್ಯಮಟ್ಟದ ಉದ್ಘಾಟನಾ ಸಮಾರಂಭವು ಜೂನ್ 10ರಂದು ಅಡ್ಡೂರು ಜುಮಾ ಮಸ್ಜಿದ್ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್‌ನ ಪ್ರಧಾನ ಕಾರ್ಯದರ್ಶಿ ಎಂ.ಟಿ.ಅಬ್ದುಲ್ಲ ಮುಸ್ಲಿಯಾರ್ ಮಾತನಾಡುತ್ತಾ, ಶತಮಾನಗಳ ಇತಿಹಾಸವಿರುವ ಧಾರ್ಮಿಕ ಸಂಘಟನೆಯಾಗಿರುವ ಸಮಸ್ತವು, ಶೈಕ್ಷಣಿಕ ಕ್ಷೇತ್ರಕ್ಕೆ ಮಹತ್ತರ ಕೊಡುಗೆಯನ್ನು ನೀಡಿದೆ. ಕೇವಲ ಧಾರ್ಮಿಕ ಶಿಕ್ಷಣಕ್ಕೆ ಮಾತ್ರ ಸೀಮಿತಗೊಳ್ಳದೆ, ಲೌಖಿಕ ಶಿಕ್ಷಣವನ್ನು ಧಾರೆಯೆರೆಯುವ ಮೂಲಕ ಕಾಲಿದ ಬೇಡಿಕೆಗೆ ಸ್ಪಂದಿಸುತ್ತಾ ಬಂದಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಲ್ಲಿಕೋಟೆಯ ಖಾಝಿ ಸೈಯದ್ ಮುಹಮ್ಮದ್ ಕೋಯ ಜಮಲುಲೈಲಿ ತಂಙಳ್ ಮಾತನಾಡಿ, ಸಣ್ಣ ಪ್ರಾಯದಲ್ಲೇ ಮಕ್ಕಳನ್ನು ಇಸ್ಲಾಮಿಕ್ ಸಂಸ್ಕೃತಿಯಲ್ಲಿ ಪರಿಪಾಲನೆ ಮಾಡುವುದರ ಜೊತೆಗೆ ಜಾತ್ಯಾತೀತ ಸಮಾಜದಲ್ಲಿ ಬದುಕಲು ಆವಶ್ಯವಾದ ನೈಪುಣ್ಯತೆ, ದೇಶಪ್ರೇಮ, ಸಹಿಷ್ಣುತಾ ಮನೋಭಾವವನ್ನು ರೂಪಿಕರಿಸುವ ಪಠ್ಯ ಪದ್ಧತಿಯನ್ನು ಅಲ್ ಬಿರ್ರ್‌ ಜಾರಿಗೊಳಿಸಿದೆ ಎಂದು ಹೇಳಿದರು.

ಅಲ್‌ಬಿರ್ರ್‌ ಎ.ಡಿ. ಇನ್‌ಚಾರ್ಜ್ ಫೈಝಲ್ ಹುದವಿ ಮಾತನಾಡಿ, 2016ರಲ್ಲಿ ಪ್ರಾರಂಭಗೊಂಡ ಅಲ್ ಬಿರ್ರ್‌ ಶಿಕ್ಷಣ ವ್ಯವಸ್ಥೆಗೆ ಕೇರಳದಲ್ಲಿ ಭಾರೀ ಜನ ಮನ್ನಣೆಯನ್ನು ಗಳಿಸಿದ್ದು, ಪ್ರಸಕ್ತ ವರ್ಷ ತನ್ನ ಕಾರ್ಯ ವ್ಯಾಪ್ತಿಯನ್ನು ಕರ್ನಾಟಕದಲ್ಲಿ ಹಾಗೂ ಗಲ್ಫ್ ರಾಷ್ಟ್ರಗಳಿಗೂ ವಿಸ್ತರಿಸಿದೆ. ಕೇರಳದಲ್ಲಿ 255 ಬ್ಯಾಚ್‌ಗಳು, ಕರ್ನಾಟಕದಲ್ಲಿ 4 ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ತರಬೇತಿ ಲಭಿಸಿದ 1,500 ಅಧ್ಯಾಪಕರು ಸೇವೆಸಲ್ಲಿಸುತ್ತಿದ್ದು, 12,000ದಷ್ಟು ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿದ್ದಾರೆೆ ಎಂದು ಹೇಳಿದರು.

ಎಸ್.ಬಿ. ಯೂಸುಫ್ ಮುಸ್ಲಿಯಾರ್ ದುಆ ಆಶಿರ್ವಚನಗೈದರು.

ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಮೌಲಾನಾ ಅನೀಸ್ ಕೌಸರಿ, ಅಡ್ಡೂರು ಖತೀಬ್ ಹಾಜಿ ಶರೀಫ್ ದಾರಿಮಿ, ರಫೀಕ್ ಮಾಸ್ಟರ್ ಶುಭಹಾರೈಸಿದರು.
ಅತಿಥಿಗಳಾಗಿ ಅಲ್‌ಬಿರ್ರ್‌ ಕೇರಳ ಕೋ-ಆರ್ಡಿನೇಟರ್ ಇಸ್ಲಾಯೀಲ್ ಮುಜದ್ದಿದ್, ಅಡ್ಡೂರು ಜುಮಾ ಮಸ್ಜಿದ್ ಅಧ್ಯಕ್ಷ ಟಿ. ಸೈಯದ್, ಜಿ.ಪಂ.ಸದಸ್ಯ ಯು.ಪಿ. ಇಬ್ರಾಹೀಂ, ಅಲ್‌ಬಿರ್ರ್‌ ವಿಟ್ಲ ಅಧ್ಯಕ್ಷ ಇ.ಕೆ.ಅಬ್ದುರ್ರಹ್ಮಾನ್ ಮುಸ್ಲಿಯಾರ್, ಅಲ್‌ಬಿರ್ರ್‌ ಮೂಡುಬಿದಿರೆ ಅಧ್ಯಕ್ಷ ಅಬ್ದುಲ್ಲಾ ಸೂರಿಂಜೆ, ಅಲ್‌ಬಿರ್ರ್‌ ಕೈಕಂಬ ಅಧ್ಯಕ್ಷ ಮುಹಮ್ಮದ್ ಆಸಿಫ್ ಸೂರಲ್ಪಾಡಿ, ಅಡ್ಡೂರು ಬದ್ರಿಯ ಜುಮಾ ಮಸೀದಿಯ ಗೌರವಾಧ್ಯಕ್ಷ ಎ.ಎಸ್. ಬಾವುಞಿ, ಉಪಾಧ್ಯಕ್ಷರಾದ ಎಂ.ಎಸ್.ಶೇಖಬ್ಬ, ಅಹ್ಮದ್‌ಬಾವ ಅಂಗಡಿಮನೆ, ಖತೀಬ್ ಹಾಜಿ ಶರೀಫ್ ದಾರಿಮಿ, ಕಾರ್ಯದರ್ಶಿ ಇಸ್ಹಾಖ್, ಬಿಎಚ್‌ಜೆಎಂ ಕಾಂಜಿಲಕೋಡಿ ಅಧ್ಯಕ್ಷ ಅಹ್ಮದ್‌ಬಾವ ಕಾಂಜಿಲಕೋಡಿ, ಗೌರವಾಧ್ಯಕ್ಷ ಎಂ.ಎಚ್.ಮುಹಿಯುದ್ದೀನ್, ಬಿಎಫ್‌ಜೆಎಂ ಪೊಳಲಿ ಅಧ್ಯಕ್ಷ ಕೆ.ಇ.ರಮ್ಲಾನ್, ಜಿಲ್ಲಾ ಮದ್ರಸ ಮ್ಯಾನೇಜ್‌ಮೆಂಟ್ ಕೋಶಾಧಿಕಾರಿ ಸಾಹುಲ್ ಹಮೀದ್ ಮೆಟ್ರೋ, ಗುರುಪುರ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ನೌಶಾದ್ ಹಾಜಿ ಸೂರಲ್ಪಾಡಿ, ಎಎಂಬಿ ಅಡ್ಡೂರು ಸದರ್ ಮುಅಲ್ಲಿಂ ಮುಹಮ್ಮದ್ ಮುಸ್ತಫಾ ಹನೀಫಿ, ಅಡ್ಡೂರು ಸೆಂಟ್ರಲ್ ಕಮಿಟಿ ಅಧ್ಯಕ್ಷ ಎಂ.ಶರೀಫ್, ಶಿಫಾ ಕ್ಲಿನಿಕ್ ಅಡ್ಡೂರು ಡಾ.ಇ.ಕೆ.ಸಿದ್ದೀಕ್, ಗುರುಪುರ ಗ್ರಾಪಂ ಸದಸ್ಯ ಎ.ಕೆ.ಅಶ್ರಫ್, ಅಡ್ಡೂರು ಫೈವ್‌ಸ್ಟಾರ್ ಯಂಗ್ ಬಾಯ್ಸಾ ಅಧ್ಯಕ್ಷ ಹಬೀಬ್, ಎಸ್ಕೆಎಸ್ಸೆಸ್ಸೆಫ್ ಅಡ್ಡೂರು ಕ್ಲಸ್ಟರ್ ಅಧ್ಯಕ್ಷ ಬಶೀರ್ ಸಾಗರ್, ಎಸ್‌ಡಿಪಿಐ ಅಡ್ಡೂರು ಅಧ್ಯಕ್ಷ ಎ.ಕೆ. ಮುಸ್ತಾಫ, ಎಸ್ಕೆಎಸ್ಸೆಸ್ಸೆಫ್ ಕಟ್ಟಪುಣಿ ಯುನಿಟ್ ಅಧ್ಯಕ್ಷ ಮುಸ್ತಫಾ ಕಟ್ಟಪುಣಿ, ನೌಫಲ್ ಗೋಳಿಪಡ್ಪು, ಪಿಎಫ್‌ಐ ಅಡ್ಡೂರು ಅಧ್ಯಕ್ಷ ಹಕೀಂ ಅಡ್ಡೂರು, ಮದ್ರಸಾ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಡಿ.ಎಸ್.ರಫೀಕ್, ಅಡ್ಡೂರು ಅಲ್ ಬಿರ್ರ್‌ ಕೋಆರ್ಡಿನೇಟರ್ ಕೆ. ಉಮ್ಮರ್ ಫಾರೂಕ್ ಪಾಲ್ಗೊಂಡಿದ್ದರು.

ತರಗತಿ ಕೊಠಡಿ ಉದ್ಘಾಟನೆ

ಪ್ಲೇ ವೇ ಮಾದರಿಯಲ್ಲಿ ಸಿದ್ಧಪಡಿಸಲಾಗಿರುವ ತರಗತಿ ಕೊಠಡಿಯನ್ನು ಅಲ್ ಬಿರ್ರ್‌ನ ಚೇರ್‌ಮ್ಯಾನ್ ಸೈಯದ್ ಮುಹಮ್ಮದ್ ಕೋಯ ಜಮಲುಲೈಲಿ ತಂಙಳ್ ಉದ್ಘಾಟಿಸಿದರು.

ಅಲ್‌ಬಿರ್ರ್‌ ಸಂಸ್ಥೆಯ ಪ್ರಾಂಶುಪಾಲ ಸಿದ್ದೀಕ್ ಫೈಝಿ ಸ್ವಾಗತಿಸಿದರು. ಕರ್ನಾಟಕ ಅಲ್‌ಬಿರ್ರ್‌ ಕೋಆರ್ಡಿನೇಟರ್ ಅಕ್ಬರ್ ಅಲಿ ಅಡ್ಡೂರು ವಂದಿಸಿದರು.

ಮಹಿಳಾ ಕಾಲೇಜು ಪ್ರಾರಂಭ

ಅಲ್ ಬಿರ್ರ್‌ ಕನ್ವಿನರ್ ಶೈಖುನಾ ಉಮರ್ ಫೈಝಿ ಮುಕ್ಕಂ ಪ್ರಾಸ್ತಾವಿಕ ಭಾಷಣಗೈಯುತ್ತಾ, ಕಳೆದು ಆರು ದಶಮಾನಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗಳನ್ನು ಮಾಡುತ್ತಾ ಬಂದಿರುವ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್, ಮದ್ರಸ ಶಿಕ್ಷಣದ ಜೊತೆಗೆ ಅಲ್ ಬಿರ್ರ್‌ ಪ್ರೀ ಸ್ಕೂಲ್ ಅನ್ನು ಪ್ರಾರಂಭಿಸಿ ಭಾರೀ ಯಶಸ್ಸನ್ನು ಕಂಡಿದೆ. ಇದರ ಜೊತೆಗೆ ಎಸೆಸೆಲ್ಸಿ, ಪಿಯುಸಿ ನಂತರ ಶಿಕ್ಷಣವನ್ನು ಮೊಟಕುಗೊಳಿಸುವ ಮುಸ್ಲಿಂ ಮಹಿಳೆಯರಿಗಾಗಿ ಧರ್ಮದ ಚೌಕಟ್ಟಿನೊಳಗೆ ಲೌಖಿಕ ಶಿಕ್ಷಣವನ್ನು ಪಡೆಯುವಂತಹ ಮಹಿಳಾ ಕಾಲೇಜುಗಳನ್ನು ಪ್ರಾರಂಭಿಸಲಾಗಿದೆ. ಪ್ರಥಮ ವರ್ಷದಲ್ಲೇ ಕೇರಳದಲ್ಲಿ 80ರಷ್ಟು ಕಾಲೇಜುಗಳಿಗೆ ಅಂಗೀಕಾರ ನೀಡಿದ್ದು, ಮುಂದಿನ ವರ್ಷ ಇದನ್ನು ಇತರ ರಾಜ್ಯಗಳಿಗೂ ವಿಸ್ತರಿಸುವ ಮೂಲಕ ಮಹಿಳಾ ಶೈಕ್ಷಣಿಕ ಕ್ರಾಂತಿಯನ್ನು ಸೃಷ್ಟಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News