ಪ.ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆಯ ಅಗತ್ಯ ಎದುರಾಗಬಹುದು ಎಂದ ರಾಜ್ಯಪಾಲ ತ್ರಿಪಾಠಿ

Update: 2019-06-10 14:09 GMT

ಹೊಸದಿಲ್ಲಿ, ಜೂ.10: ರಾಜಕೀಯ ಹಿಂಸಾಚಾರದಿಂದ ಸುದ್ದಿಯಾಗುತ್ತಿರುವ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆಯ ಅಗತ್ಯ ಎದುರಾಗಬಹುದು ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಕೇಶರಿ ನಾಥ್ ತ್ರಿಪಾಠಿ ಹೇಳಿದ್ದಾರೆ.

Indiatoday.in ಜೊತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ರಾಜ್ಯದ ಸದ್ಯದ ಸ್ಥಿತಿಯ ಬಗ್ಗೆ ತಾನು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರಲ್ಲಿ ವಿವರಿಸಿದ್ದೇನೆ ಎಂದರು.

ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ರಾಷ್ಟ್ರಪತಿ ಆಳ್ವಿಕೆಯ ಅಗತ್ಯ ಎದುರಾಗಬಹುದು ಎಂದು ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯ ಹೇಳಿದ್ದಾರೆ. ಈ ಬಗ್ಗೆ ನೀವೇನು ಹೇಳುತ್ತೀರಿ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, “ಅಗತ್ಯ ಎದುರಾಗಬಹುದು. ಅಗತ್ಯ ಬಿದ್ದಾಗ ಕೇಂದ್ರ ಸರಕಾರದ ಅದನ್ನು ಪರಿಗಣಿಸಲಿದೆ. ಆದರೆ ಪ್ರಧಾನಿ ಮತ್ತು ಅಮಿತ್ ಶಾ ಜೊತೆ ನಾನು ರಾಷ್ಟ್ರಪತಿ ಆಳ್ವಿಕೆಯ ಬಗ್ಗೆ ಚರ್ಚಿಸಿಲ್ಲ” ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News