ಕೊಚ್ಚಾರ್ ತನಿಖಾ ಸಂಸ್ಥೆಯ ಮುಂದೆ ಹಾಜರಾಗಲು ಚಂದಾ ಕೊಚ್ಚಾರ್ ವಿಫಲ

Update: 2019-06-10 14:58 GMT

ಹೊಸದಿಲ್ಲಿ, ಜೂ.10: ಹಣ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಚಂದಾ ಕೊಚ್ಚಾರ್ ಅನಾರೋಗ್ಯದ ಕಾರಣ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲು ವಿಫಲವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನಾರೋಗ್ಯದ ಕಾರಣ ಕೊಚ್ಚಾರ್ ಕಳೆದ ವಾರವೂ ತನಿಖಾ ಸಂಸ್ಥೆಯ ಮುಂದೆ ಹಾಜರಾಗಿರಲಿಲ್ಲ. ಈ ವಾರಾಂತ್ಯದಲ್ಲಿ ವಿಚಾರಣೆಗೆ ಹಾಜರಾಗುವಂತೆ ಕೊಚ್ಚಾರ್‌ಗೆ ಇಡಿ ಸೂಚಿಸಿದೆ. ಕೊಚ್ಚಾರ್ ನೀಡಿದ ಹೇಳಿಕೆಗಳನ್ನು ದೃಢಪಡಿಸಿಕೊಳ್ಳಲು ಮತ್ತು ಮತ್ತಷ್ಟು ತನಿಖೆಯಲ್ಲಿ ಮತ್ತಷ್ಟು ಮುನ್ನಡೆ ಸಾಧಿಸಲು ಬ್ಯಾಂಕ್‌ನ ಇತರ ಅಧಿಕಾರಿಗಳನ್ನು ವಿಚಾರಣೆಗೆ ಕರೆಯುವ ಬಗ್ಗೆ ಕೇಂದ್ರ ತನಿಖಾ ಸಂಸ್ಥೆ ಯೋಚಿಸುತ್ತಿದೆ ಎಂದು ಸುದ್ದಿಸಂಸ್ಥೆ ಪಿಟಿಐಗೆ ಅಧಿಕಾರಿಗಳು ತಿಳಿಸಿದ್ದಾರೆ. ಐಸಿಐಸಿಐ ಬ್ಯಾಂಕ್ ಮತ್ತು ವೀಡಿಯೊಕಾನ್ ಸಮೂಹ ಭಾಗಿಯಾಗಿರುವ ಈ ಪ್ರಕಣದಲ್ಲಿ ಜಾರಿ ನಿರ್ದೇಶನಾಲಯ ಕಳೆದ ತಿಂಗಳು ಕೋಚ್ಚರ್ ಅವರ ಪತಿ ದೀಪಕ್ ಕೋಚ್ಚರ್ ವಿಚಾರಣೆ ನಡೆಸಿತ್ತು ಮತ್ತು ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿತ್ತು.

ಹಣ ವಂಚನೆ ತಡೆ ಕಾಯ್ದೆಯಡಿ ಜಪ್ತಿ ಮಾಡುವ ಉದ್ದೇಶದಿಂದ ಕೋಚ್ಚರ್ ಅವರ ಆಸ್ತಿಯ ವಿವರಣೆಯನ್ನೂ ಇಡಿ ಕಲೆ ಹಾಕುತ್ತಿದೆ. ಈ ಪ್ರಕರಣದಲ್ಲಿ ದೀಪಕ್ ಕೊಚ್ಚಾರ್ ಸಹೋದರ ರಾಜೀವ್ ಕೊಚ್ಚಾರ್ ಅವರನ್ನೂ ಇಡಿ ತನಿಖೆಗೊಳಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News