ಮಾತೃಶ್ರೀ ಯೋಜನೆ: ಜೂ.12ರಂದು ಹೆಸರು ನೋಂದಣಿ ಅಭಿಯಾನ
Update: 2019-06-10 20:37 IST
ಮಂಗಳೂರು, ಜೂ.10: ಮುಖ್ಯಮಂತ್ರಿಗಳ ಮಾತೃಶ್ರೀ ಯೋಜನೆಗೆ ಫಲಾನುಭವಿಗಳನ್ನು ನೋಂದಾಯಿಸಲು ಜೂ.12ರಂದು ಜಿಲ್ಲೆಯ 2104 ಅಂಗನವಾಡಿ ಕೇಂದ್ರಗಳಲ್ಲಿ ನೋಂದಣಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಆದ್ಯತಾ ಕುಟುಂಬದಲ್ಲಿರುವ ಗರ್ಭಿಣಿಯರು ತಮಗೆ ಹತ್ತಿರವಿರುವ ಅಂಗನವಾಡಿ ಕೇಂದ್ರಕ್ಕೆ ಹೋಗಿ ಮಾತೃಶ್ರೀ ಯೋಜನೆಗೆ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
ಅರ್ಹ ಗರ್ಭಿಣಿಯರಿಗೆ ಹೆರಿಗೆ ಪೂರ್ವ 3,000 ರೂ., ಹಾಗೂ ಹೆರಿಗೆ ನಂತರ 3,000 ರೂ. ವನ್ನು ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಜಮೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರ ಪ್ರಕಟನೆ ತಿಳಿಸಿದೆ.