×
Ad

ಸಂತ ಆಂತೋನಿ ಮಹೋತ್ಸವದ 11ನೇ ದಿನದ ನವೇನ ಪ್ರಾರ್ಥನೆ

Update: 2019-06-10 20:38 IST

ಮಂಗಳೂರು, ಜೂ.10: ಸಂತ ಆಂತೋನಿಯ ವಾರ್ಷಿಕ ಮಹೋತ್ಸವಕ್ಕೆ ತಯಾರಿಯಾಗಿ ನಡೆಯುತ್ತಿರುವ ಹನ್ನೊಂದನೇ ದಿನದ ನವೇನ ಪ್ರಾರ್ಥನೆಯು ಸೋಮವಾರ ಜರುಗಿತು.

ಕಿನ್ನಿಗೋಳಿ ಧರ್ಮಕೇಂದ್ರದ ಸಹಾಯಕ ಗುರು ಫಾ. ರೂಪೇಶ್ ತಾವ್ರೊ ಬಲಿ ಪೂಜೆ ಅರ್ಪಿಸಿ ಸಮಾಜ ಸೇವಕರಿಗಾಗಿ ಪ್ರಾರ್ಥನೆ ಸಲ್ಲಿಸಿದರು.

ಕುಷ್ಟರೋಗಿಗಳ ಮಧ್ಯದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ, ಕೊನೆಗೆ ತಾವು ಸಹ ಕುಷ್ಟರೋಗಕ್ಕೆ ಗುರಿಯಾದ ಮೊಳೊಕ್ಕಾಮಿಯಾ ಸಂತ ಡೆಮಿಯನ್‌ರ ಜೀವನದ ನಿದರ್ಶನ ನೀಡಿ ಪ್ರತಿಯೊಬ್ಬ ಕೆಥೊಲಿಕರೂ ಪರರ ಸೇವೆ ಮಾಡಬೇಕು. ಸಮಾಜ ಸೇವಕರಿಗಾಗಿ ಪ್ರಾರ್ಥಿಸಬೇಕು ಎಂದು ರೂಪೇಶ್ ತಾವ್ರೊ ಕರೆ ನೀಡಿದರು.

ಸಂಸ್ಥೆಯ ಸಹಾಯಕ ನಿರ್ದೇಶಕ ಫಾ. ತ್ರಿಶಾನ್ ಡಿಸೋಜ ಜಪಸರ ಹಾಗೂ ನವೇನ ಪ್ರಾರ್ಥನೆ ನಡೆಸಿಕೊಟ್ಟರು. ಆಶ್ರಮದ ಸಹಾಯಕ ನಿರ್ದೇಶಕ ಫಾ.ರೊಶನ್ ಡಿಸೋಜ ಮತ್ತಿತರರು ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News