ಪತ್ರಿಕೋದ್ಯಮಿ-ಕೈಗಾರಿಕೋದ್ಯಮಿ ವಿ.ಎಸ್. ಕುಡ್ವರ ಜನ್ಮ ದಿನಾಚರಣೆ
ಮಂಗಳೂರು, ಜೂ.10: ಖ್ಯಾತ ಪತ್ರಿಕೋದ್ಯಮಿ ಮತ್ತು ಕೈಗಾರಿಕೋದ್ಯಮಿ ದಿ.ವಿ.ಎಸ್.ಕುಡ್ವ ಅವರ 120ನೇ ಜನ್ಮ ದಿನಾಚರಣೆ (ಸಂಸ್ಥಾಪಕರ ದಿನಾಚರಣೆ)ಯನ್ನು ರವಿವಾರ ಕೆನರಾ ವರ್ಕ್‌ಶಾಪ್ ಸಂಸ್ಥೆಯ ಪ್ರಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಶ್ರೀನಿವಾಸ ಕುಡ್ವರ ಅಧ್ಯಕ್ಷತೆಯಲ್ಲಿ ಜರುಗಿತು.
ಕೆನರಾ ವರ್ಕ್‌ಶಾಪ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಪ್ರೇಮ್‌ನಾಥ ಕುಡ್ವ ದಿ. ಕುಡ್ವರ ಪುತ್ಥಳಿಗೆ ಹಾರಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ವಿ.ಎಸ್. ಕುಡ್ವರ ಜೀವನ ಚರಿತ್ರೆ ಕೃತಿಯ ಲೇಖಕ ವಸಂತ ಮಲ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ಈ ಸಂದರ್ಭ ನಿವೃತ್ತ ಸಿಬ್ಬಂದಿಗಳಾದ ಕೌಶಲ್ಯ ಮತ್ತು ದೇವದಾಸ್ ಗುಜರನ್ ಅವರನ್ನು ಸನ್ಮಾನಿಸಲಾಯಿತು. 61 ಕಾರ್ಮಿಕರುಗಳು ತಮ್ಮ ದೈನಂದಿನ ಕರ್ತವ್ಯಕ್ಕೆ ಶೇ.100 ಸಲ್ಲಿಸಿದ ಹಾಜರಾತಿಯನ್ನು ಪರಿಗಣಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮಹಾಪ್ರಬಂಧಕ ರವಿಚಂದ್ರ ರಾವ್, ಉಪಮಹಾಪ್ರಬಂಧಕ ಉಮಾನಾಥ ಭಟ್ ಉಪಸ್ಥಿತರಿದ್ದರು.
ಸಂಸ್ಥೆಯ ಉಪಮಹಾಪ್ರಬಂಧಕ ಸಲೀಂ ಸ್ವಾಗತಿಸಿದರು. ಉಷಾ ವಿಶ್ವನಾಥ ನಿವೃತ ಕಾರ್ಮಿಕರ ಸೇವೆಯನ್ನು ಶ್ಲಾಘಿಸಿದರು. ಸಂಜೀವ ಪೂಜಾರಿ ವಂದಿಸಿದರು.