ಜೂ.12: ರೊಜಾರಿಯೊದಲ್ಲಿ ಶೈಕ್ಷಣಿಕ ಸಮ್ಮೇಳನ
Update: 2019-06-10 20:44 IST
ಮಂಗಳೂರು, ಜೂ.10: ಪ್ರೌಢಶಾಲಾ ಮುಖ್ಯಸ್ಥರ ಹಾಗೂ ಪ.ಪೂ.ಕಾಲೇಜು ಪ್ರಾಂಶುಪಾಲರ ಸಂಘದ ವತಿಯಿಂದ ಜೂ.12ರಂದು ನಗರದ ರೊಜಾರಿಯೊ ಸಭಾಭವನದಲ್ಲಿ ಶೈಕ್ಷಣಿಕ ಸಮ್ಮೇಳನ ನಡೆಯಲಿದೆ.
ಈ ಸಂದರ್ಭ 2019ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ 625ರಲ್ಲಿ 625 ಅಂಕ ಪಡೆದ ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಸುಜಾನ್‌ರನ್ನು ಸನ್ಮಾನಿಸಲಾಗುವುದು. ಅಲ್ಲದೆ ಸದಸ್ಯ ಶಾಲೆಗಳಿಗೆ ಸ್ಟ್ಯಾನಿ ಬಾರೆಟ್ಟೊ ಬಂಪರ್ ಬಹುಮಾನ ಗೆಲ್ಲುವ ಅವಕಾಶವಿದೆ.
ಸದಸ್ಯ ಶಾಲೆಗಳಲ್ಲಿ ಶೇ.100 ಫಲಿತಾಂಶ ಪಡೆದ ಸಂಸ್ಥೆಗಳ ಮುಖ್ಯಸ್ಥರಿಗೆ, ಪ್ರತಿ ಶಾಲಾ ಹಂತದಲ್ಲಿ ಅತ್ಯಧಿಕ ಅಂಕ ಪಡೆದ ಆಂಗ್ಲ ಮತ್ತು ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ, ನಿವೃತ್ತ ಮುಖ್ಯಸ್ಥರಿಗೆ ಸನ್ಮಾನ ಹಾಗೂ ಸ್ಟ್ಯಾನಿ ಫ್ರಾನ್ಸಿಸ್ ಬಾರೆಟ್ಟೊ ಸ್ಕಾಲರ್‌ಶಿಪ್ ವಿತರಣೆ ನಡೆಯಲಿದೆ. ಎಂದು ಪ್ರಕಟನೆ ತಿಳಿಸಿದೆ.