ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್: ಪದಾಧಿಕಾರಿಗಳ ಆಯ್ಕೆ
Update: 2019-06-10 20:46 IST
ಮಂಗಳೂರು, ಜೂ.10: ಕಿನ್ಯ ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್‌ನ ವಾರ್ಷಿಕ ಮಹಾಸಭೆಯು ಸಂಸ್ಥೆಯ ನಿರ್ದೇಶಕ ಹಾಗೂ ಚುನಾವಣಾ ಅಧಿಕಾರಿ ಕೆ.ಕೆ. ಇಸ್ಮಾಯಿಲ್ ಅಧ್ಯಕ್ಷತೆಯಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಶೇಖ್ ಇಬ್ರಾಹೀಂ ಕುರಿಯಕ್ಕಾರ್, ಉಪಾಧ್ಯಕ್ಷರಾಗಿ ನವಾಝ್ ಉಕ್ಕುಡ, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹೀಂ ಖಲೀಲ್ ಬಿ., ಜೊತೆ ಕಾರ್ಯದರ್ಶಿಯಾಗಿ ತಂಝಿಲ್, ಕೋಶಾಧಿಕಾರಿಯಾಗಿ ಖಾದರ್ ಮಜಲ್ ಆಯ್ಕೆಯಾಗಿದ್ದಾರೆ.