×
Ad

ತನ್ನ ಜೊತೆ ಕುಣಿಯುವಂತೆ ಮಹಿಳೆಯನ್ನು ಒತ್ತಾಯಪಡಿಸಿದ ಶಾಸಕ !

Update: 2019-06-10 21:12 IST

ಮೊರೆ, ಜೂ.10: ಬಿಹಾರದ ರಾಷ್ಟ್ರೀಯ ಜನತಾ ದಳ(ಆರ್‌ ಜೆಡಿ)ದ ಶಾಸಕ ತನ್ನ ಜೊತೆ ಕುಣಿಯುವಂತೆ ಮಹಿಳೆಯೊಬ್ಬರನ್ನು ಒತ್ತಾಯಪಡಿಸಿದ ಘಟನೆ ಮಣಿಪುರದಲ್ಲಿ ನಡೆದಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ.

 ಭಾರತ-ಮ್ಯಾನ್ಮಾರ್ ಗಡಿಯಲ್ಲಿರುವ ಮೊರೆ ಪಟ್ಟಣಕ್ಕೆ ಅಧ್ಯಯನ ಪ್ರವಾಸಕ್ಕೆಂದು ತೆರಳಿದ್ದ ತಂಡದ ಸದಸ್ಯನಾಗಿದ್ದ ಆರ್‌ ಜೆಡಿ ಶಾಸಕ ಯದುವಂಶ್ ಕುಮಾರ್ ಯಾದವ್ ಈ ರೀತಿ ಅಸಭ್ಯವಾಗಿ ವರ್ತಿಸಿ ಟೀಕೆಗೊಳಗಾಗಿರುವ ಶಾಸಕರಾಗಿದ್ದಾರೆ. ಸದ್ಯ ಈ ಕುರಿತ ವೀಡಿಯೊ ವೈರಲ್ ಆಗಿದ್ದು, ಜೋರಾದ ಸಂಗೀತಕ್ಕೆ ಕುಣಿಯುತ್ತಿರುವ ಯಾದವ್ ಮಹಿಳೆ ನಿರಾಕರಿಸಿದರೂ ಆಕೆಯ ಭುಜವನ್ನು ಹಿಡಿಯಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಜೊತೆಗಿದ್ದ ಎಲ್ಲ ಪುರುಷರೂ ಮಹಿಳೆಯನ್ನು ತಬ್ಬಿಕೊಳ್ಳಲು ಪ್ರಯತ್ನಿಸುತ್ತಿದ್ದರೂ ಆಕೆ ಅವರಿಂದ ದೂರ ಸರಿಯುತ್ತಿರುವುದು ಕಂಡುಬಂದಿದೆ.

 ಜೂನ್ ಒಂದರಂದು ಈ ಘಟನೆ ನಡೆದಿದೆ. ಯಾದವ್ ಅವರು ಬಿಹಾರ ಶಾಸಕ ಸಭೆಯ ಆಂತರಿಕ ಸಂಪನ್ಮೂಲ ಮತ್ತು ಕೇಂದ್ರದ ನೆರವು ಬಗೆಗಿನ ಸಮಿತಿಯ ನೇತೃತ್ವವಹಿಸಿದ್ದಾರೆ. ಈ ತಂಡವು, ಎನ್‌ಡಿಎ ಸರಕಾರದ ಆ್ಯಕ್ಟ್ ಈಸ್ಟ್ ನೀತಿಯಡಿ ನಡೆದಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ವೀಕ್ಷಿಸಲು ಮಣಿಪುರಕ್ಕೆ ಭೇಟಿ ನೀಡಿತ್ತು. ಯಾದವ್ ಜೊತೆ ಬಿಜೆಪಿಯ ಸಚಿನ್ ಪ್ರಸಾದ್ ಸಿಂಗ್, ಸಂಯುಕ್ತ ಜನತಾದಳದ ರಾಜ್‌ಕುಮಾರ್ ರಾಯ್ ಮತ್ತು ಆರ್‌ಜೆಡಿಯ ಇನ್ನೊರ್ವ ನಾಯಕ ರಾಜಾ ಪಕರ್ ಇದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News