×
Ad

ಗಿರೀಶ್ ಕಾರ್ನಾಡ್ ನಿಧನಕ್ಕೆ ಸಿಪಿಎಂ ಸಂತಾಪ

Update: 2019-06-10 21:17 IST

ಉಡುಪಿ, ಜೂ.10: ಜ್ಞಾನಪೀಠ ಪ್ರಶಸ್ತಿ ವಿಜೇತ, ನಟ, ನಾಟಕಕಾರ, ಸಾಹಿತಿ ಗಿರೀಶ್ ಕಾರ್ನಾಡ್ ನಿಧನಕ್ಕೆ ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಅವರ ಎಲ್ಲಾ ಕೃತಿಗಳಲ್ಲೂ ಪ್ರಗತಿಪರ ಚಿಂತನೆಗಳು, ಜಾತ್ಯತೀತ ಮನೋ ಭಾವ ತುಂಬಿ ತುಳುಕುತ್ತಿತ್ತು. ಮೂಢ ನಂಬಿಕೆ, ಜಾತಿ ತಾರತಮ್ಯದ ವಿರುದ್ಧವೂ ನಿರ್ಭೀತಿಯಿಂದ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಬಹುಮುಖ ಪ್ರತಿಭೆಯ ಕಾರ್ನಾಡರು ಬಹುಭಾಷಾ ನಟರೂ ಆಗಿದ್ದರು. ಅವರ ಚಿಂತನೆ ಎಲ್ಲರಿಗೂ ಮಾದರಿಯಾಗಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News