ಕಲ್ಲಡ್ಕ ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಈದ್ ಸಮ್ಮಿಲನ
Update: 2019-06-10 21:33 IST
ಬಂಟ್ವಾಳ, ಜೂ. 10: ಕಲ್ಲಡ್ಕ ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಈದ್ ಸಮ್ಮಿಲನ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಅಮಾನುಲ್ಲಾ ಖಾನ್ ಅವರು ಉಪವಾಸ ತಿಂಗಳ ವೃತದಿಂದ ನಾವು ಗಳಿಸಿದ ದೇವನಿಷ್ಠೆ ಹಾಗೂ ಸ್ಪೂರ್ತಿಯನ್ನು ತಮ್ಮ ಮುಂದಿನ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕೆಂಬುದರ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಹೈದರ್ ಆಲಿ, ಸುಲೈಮಾನ್ ಅಪೋಲೊ ಹಾಗೂ ಕಾಲೇಜಿನ ಉಪಪ್ರಾಂಶುಪಾಲೆ ಮಮಿತಾ ಎಸ್. ರೈ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲೆ ಗೀತಾ ಜಿ. ಭಟ್ ಪ್ರಸ್ತಾವಿಸಿದರು. ಸೌಶಾನಾ ಈದ್‍ನ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿನಿಯರು ಈದ್ ಸೌಹಾರ್ದ ಗೀತೆಯನ್ನು ಹಾಡಿದರು.
ಮೈಮುನ ರಶ್ಮಾ ಕಿರಾತ್ ಪಠಿಸಿದರು. ಆಯಿಷತ್ ನಫ ಸ್ವಾಗತಿಸಿ, ರಮೀಝ ವಂದಿಸಿ, ಸಾರಾ ಝುಲ್ಫ ಕಾರ್ಯಕ್ರಮವನ್ನು ನಿರೂಪಿಸಿದರು.