×
Ad

ಎಕ್ಕೂರಿನಲ್ಲಿ ಬೈಕಿಗೆ ಲಾರಿ ಢಿಕ್ಕಿ: ಬೈಕ್ ಸವಾರ ಮೃತ್ಯು

Update: 2019-06-10 21:54 IST

ಮಂಗಳೂರು, ಜೂ.10: ನಗರದ ಎಕ್ಕೂರಿನಲ್ಲಿ ಸೋಮವಾರ ರಾತ್ರಿ ಬೈಕಿಗೆ ಲಾರಿಯೊಂದು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಮೃತ ಬೈಕ್ ಸವಾರನ ಗುರುತು ಇನ್ನಷ್ಟೇ ಪತ್ತೆಯಾಗಬೇಕಾಗಿದೆ.

ಸಂಜೆ 7:30ರ ವೇಳೆಗೆ ಬೈಕ್ ಮತ್ತು ಲಾರಿ ಪಂಪ್‌ವೆಲ್ ಕಡೆಯಿಂದ ತೊಕ್ಕೋಟು ಕಡೆಗೆ ಸಂಚರಿಸುತ್ತಿದ್ದವು. ಎಕ್ಕೂರಿನ ಕೇಂದ್ರೀಯ ವಿದ್ಯಾಲಯದ ಬಳಿ ತಲುಪಿದಾಗ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ದಕ್ಷಿಣ ಠಾಣೆಯ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News